ಎಂಎಸ್‍ಪಿ ದರದಲ್ಲಿ ತೊಗರಿ ಕಾಳು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ಅವಕಾಶ

ಬೀದರ:ಡಿ.25: ರಾಜ್ಯ ಸರ್ಕಾರದ ಆದೇಶದಂತೆ ಬೀದರ ಜಿಲ್ಲೆಯಲ್ಲಿ ಒಟ್ಟು 110 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ತೊಗರಿಯನ್ನು ಬೆಳೆದ ರೈತರು 2020-21ನೇ ಸಾಲಿಗೆ ಕೇಂದ್ರ ಸರ್ಕಾರವು ಘೋಷಿಸಿದ ಎಂಎಸ್‍ಪಿ ದರದಲ್ಲಿ ತೊಗರಿ ಕಾಳನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.
ರೈತರು ನೋಂದಣಿಗಾಗಿ 15-12-2020 ರಿಂದ 30-12-2020ರ ವರೆಗೆ ನಿಗಧಿಪಡಿಸಿದೆ. ಹಾಗೂ ಖರೀದಿ ಕಾಲವಾಧಿ ದಿನಾಂಕ: 01-01-2021 ರಿಂದ 30-01-2021ರ ವರೆಗೆ ನಿಗದಿಪಡಿಸಲಾಗಿದೆ. ಆದ್ದರಿಂದ ಜಿಲ್ಲೆಯ ರೈತರು ಸಮೀಪದ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಹೆಸರು ನೋಂದಣಿ ಮಾಡಿಕೊಂಡು ಸರ್ಕಾರ ಘೋಷಣೆ ಮಾಡಿದ ಮುಂಗಾರು ಹಂಗಾಮಿನ ಬೆಳೆಯಾದ ತೊಗರಿ ಉತ್ಪನ್ನವನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡುವುದರ ಮೂಲಕ ಬೆಂಬಲ ಬೆಲೆ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಜಿಲ್ಲಾಡಳಿತವು ತಿಳಿಸಿದೆ.
2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಘೋಷಿಸಿರುವ ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲಿಗೆ ರೂ. 6000 (ಆರು ಸಾವಿರ ರೂಪಾಯಿಗಳು ಮಾತ್ರ) ಗರಿಷ್ಠ 2,10,000-00 ಮೆಟ್ರಿಕ್ ಟನ್‍ಗಳ ಎಫ್.ಎ.ಕ್ಯೂ. ಗುಣಮಟ್ಟದ ತೊಗರಿಯನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಖರೀದಿಸಲು ಆದೇಶ ಮಾಡಿರುತ್ತದೆ.
ಬೀದರ ಜಿಲ್ಲೆಯಲ್ಲಿ 2020-21ನೇ ಸಾಲಿಗೆ ಮುಂಗಾರು ಹಂಗಾಮಿನಲ್ಲಿ ತೊಗರಿಯ ಬಿತ್ತನೆ ಕ್ಷೇತ್ರ 84,413 ಹೇಕ್ಟೇರ್ ಅಂದಾಜಿಸಿದ ಇಳಿವರಿ 10,12,956 ಕ್ವಿಂಟಲಗಳು ಬೀದರ ಜಿಲ್ಲೆಯಿಂದ ಖರೀದಿ ಕೇಂದ್ರಗಳಿಂದ 10,12,956 ಕ್ವಿಂಟಾಲ್ ಖರೀದಿ ಆಗಬಹುದೆಂದು ನೀರಿಕ್ಷಿಸಲಾಗಿದೆ.

ರೈತರು ಬೆಳೆದ ತೊಗರಿ ಕಾಳನ್ನು ಪ್ರತಿ ಎಕರೆಗೆ 7.5 ಕ್ವಿಂಟಾಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಕನಿಷ್ಠ 20 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಿ ಎಂಎಸ್‍ಪಿ ರೂ. 6000-00 ಪ್ರತಿ ಕ್ವಿಂಟಾಲ್‍ಗೆ ಖರೀದಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.