ಎಂಎಸ್‍ಐ ಕಂಪನಿಯಿಂದ ಎರಡು ಕಾನ್ಸಂಟ್ರೇಟರ್ಸ್ ಕೊಡುಗೆ

ಚಿತ್ರದುರ್ಗ,ಜೂ.8;
 ಚಿತ್ರದುರ್ಗ ತಾಲ್ಲೂಕಿನ ದೊಡ್ಡ ಸಿದ್ದವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಈಚೆಗೆ ಎಂಎಸ್‍ಐ ಕಂಪನಿಯ ವೆಂಕಟೇಶ್ ಮತ್ತ ಧನಂಜಯ್ ಅವರು ಎರಡು ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳನ್ನು ನೀಡಿದರು.
 ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಈ ಉಪಕರಣಗಳು ಗ್ರಾಮ ಮಟ್ಟದಲ್ಲಿ ಬಹಳಷ್ಟು ಉಪಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
 ಎಂಎಸ್‍ಐ ಕಂಪನಿಯ ವೆಂಕಟೇಶ್ ಮಾತನಾಡಿ, ಆಸ್ಪತ್ರೆಗೆ ಇನ್ನೂ ಅವಶ್ಯಕತೆ ಇರುವ ಉಪಕರಣಗಳನ್ನು ದೇಣಿಗೆಯಾಗಿ ಪೂರೈಸಲಾಗುವುದು ಎಂದು ಹೇಳಿದರು.
 ಈ ಸಂದರ್ಭದಲ್ಲಿ ದೊಡ್ಡಸಿದ್ದವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಮೈಲಾ ಬಾನು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಾರುತಿ ಪ್ರಸಾದ್, ಶ್ರೀಧರ್, ಎಂಎಸ್‍ಐ ಕಂಪನಿಯ ಧನಂಜಯ್ ಹಾಗೂ ನಿರ್ಮಿತಿ ಕೇಂದ್ರದ ವಿಜಯ್‍ಕುಮಾರ್, ಬಸವರಾಜ್ ಬಿದ್ದನಾಳ್ ಉಪಸ್ಥಿತರಿದ್ದರು.
ಫೋಟೋ ವಿವರ: ಚಿತ್ರದುರ್ಗ ತಾಲ್ಲೂಕಿನ ದೊಡ್ಡ ಸಿದ್ದವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಈಚೆಗೆ ಎಂಎಸ್‍ಐ ಕಂಪನಿಯ ವೆಂಕಟೇಶ್ ಮತ್ತ ಧನಂಜಯ್ ಅವರು ಎರಡು ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳನ್ನು ನೀಡಿದರು.