ಎಂಎಸ್‍ಪಿ ಕಾನೂನು ಬದ್ಧಗೊಳಿಸಲು ಪ್ರಧಾನಿ ಮೋದಿಗೆ ಪತ್ರ

??????

ವಾಡಿ:ಸೆ.21: ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸಿ ಮತ್ತು ಕೃಷಿ ಉತ್ಪನ್ನಗಳು ಮತ್ತು ಅಗತ್ಯ ವಸ್ತುಗಳ “ಸಗಟು ಹಾಗೂ ಚಿಲ್ಲರೆ ವ್ಯಾಪಾರವನ್ನು ಸಂಪೂರ್ಣವಾಗಿ ಸರ್ಕಾರವೇ ವಹಿಸಿಕೊಳ್ಳುವ ಆಲ್ ಔಟ್ ಸ್ಟೇಟ್ ಟ್ರೇಡಿಂಗ್ ಪದ್ದತಿಯನ್ನು ಜಾರಿಗೋಳಿಸಬೇಕು ಎಂದು ಒತ್ತಾಯಿಸಿ (ಎಐಕೆಕೆಎಮ್‍ಎಸ್) ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಕಲಬುರಗಿ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತ್ತು.

ರೈತ ಕೃಷಿ ಕಾರ್ಮಿಕರ ಸಂಘಟನೆ ತಾಲೂಕು ಕಾರ್ಯದರ್ಶಿ ಶಿವಕುಮಾರ ಆಂದೋಲಾ ಮಾತನಾಡಿ, ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಏರುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣ ಬಡ ಜನತೆಯ ಜೀವನದ ಮೇಲೆ ಬರೆ ಎಳೆಯುವುದರ ಜೊತೆಗೆ ಬೀಜ, ರಸಗೊಬ್ಬರಗಳ ಬೆಲೆಯನ್ನು ದುಬಾರಿ ಮಾಡಿ, ಅದರ ಮೇಲಿರುವ ಸಬ್ಸಿಡಿಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಕೃಷಿಯನ್ನು ದುಬಾರಿ ಮಾಡಲಾಗಿದೆ. ಇನ್ನೊಂದೆಡೆ, ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರವೇ ಬೆಳೆಗಳನ್ನು ಕೊಂಡುಕೊಂಡು ರೈತರಿಗೆ ಪ್ರತಿ ಎಕರೆಗೆ ತಗಲುವ ವೆಚ್ಚವನ್ನು ಒಳಗೊಂಡು ಒಂದುವರೆ ಪಟ್ಟು ಬೆಂಬಲ ಬೆಲೆಯನ್ನು ಸೇರಿಸಿ ಬೆಲೆ ನಿಗದಿ ಮಾಡಲು ಎಮ್‍ಎಸ್‍ಪಿಯನ್ನು ಕಾನೂನು ಬದ್ಧಗೊಳಿಸುವುದು ಅತ್ಯಾವಶ್ಯಕವಾಗಿದೆ.

ಕಮರವಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಭೀಮರಾಯ ಹೊಸಮನಿ ಮನವಿ ಪತ್ರ ಸ್ವೀಕರಿಸಿದರು. ರೈತ ಸಂಘಟನೆಯ ಸ್ಥಳೀಯ ಅಧ್ಯಕ್ಷ ಬಸವರಾಜ ಕರದಳ್ಳಿ, ಕಾರ್ಯದರ್ಶಿ ಸೂರ್ಯಕಾಂತ ಶಿರವಾಳ, ಮುಖಂಡರಾದ ಹಣಮಂತ ತಳವಾರ, ಮರೆಪ್ಪ ಮಾಂಗ, ಮರೆಪ್ಪ ಕರಕನೋರ, ಬಸವರಾಜ ಸ್ವಾಮಿ, ಮಹಾಂತೇಶ ಹುಳಗೋಳ, ಶರಣಪ್ಪ ಪೂಜಾರಿ, ಮಹೆಮೂದ ಗುಡುಸಾಬ್, ಗುರುಪ್ರಸಾದ್ ಕರಕನೋರ, ರಾಯಪ್ಪ ಕೊಟಗಾರ ಸೇರಿದಂತೆ ಹಲವರು ಇದ್ದರು.