ಎಂಎಸ್‌ಎಂಇಗೆ ೮.೭೩ ಲಕ್ಷ ಬಾಕಿ ಸಂಕಷ್ಟದಲ್ಲಿ ಉದ್ಯಮ

ನವದೆಹಲಿ,ಜು.೨೫-ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯ ಸಂಕಷ್ಟ ಎದುರಿಸುತ್ತಿದ್ದು ಎಂಎಸ್‌ಎಂಇಗೆ ೮.೭೩ ಲಕ್ಷ ಕೋಟಿಗಳಷ್ಟು ಬಾಕಿ ಉಳಿದುಕೊಂಡಿದೆ ಎಂದು ವರದಿ ಈ ವಿಷಯ ತಿಳಿಸಿದೆ.
೨೦೨೧ರ ತನಕ ಒಟ್ಟಾರೆ ಶೇ.೮೦ ರಷ್ಟು ಬಾಕಿ ಉಳಿದುಕೊಂಡಿದೆ ಸರ್ಕಾರದ ಮೂಲಗಳು ಈ ವಿಷಯವನ್ನು ಬಹಿರಂಗ ಪಡಿಸಿವೆ. ಸೂಕ್ಷ್ಮ ವಿಭಾಗಕ್ಕೆ ೨೦೨೦ ರಲ್ಲಿ ಶೇಕಡಾ ೪೬.೧೬ ರಷ್ಟು ಇದ್ದ ಬಾಕಿ ೨೦೨೧ ರಲ್ಲಿ ಶೇಕಡಾ ೬೫.೭೩ ಏರಿಕೆಯಾಗಿದೆ. “ಸಣ್ಣ” ಘಟಕಗಳಿಗೆ ಶೇಕಡಾ ೨೮.೮೫ ರಿಂದ ೩೧.೧೦ ರಷ್ಟು ತೀವ್ರ ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ.
ಸಣ್ಣ ಕೈಗಾರಿಕೆಗಳಿಗೆ ಬಾಕಿ ನೀಡಿಕೆಯಲ್ಲಿ ವಿಳಂಬ ಧೋರಣೆಯಿಂದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದೆ. ಪಾವತಿ ವಿಳಂಬದಿಂದ “ಮಧ್ಯಮ” ವಿಭಾಗದ ಘಟಕಗಳಿಗೆ ತುಂಬಾ ಕಡಿಮೆಯಾಗಿದೆ, ೨೦೨೦ ರಲ್ಲಿ ೨೪.೦೨ ರಷ್ಟು ಇದ್ದ ಬಾಕಿ ೨೦೨೧ ರಲ್ಲಿ ೨೫.೨೦ ಪ್ರತಿಶತಕ್ಕೆ ಏರಿಕೆ
ಸಣ್ಣ ಘಟಕಗಳಿಗೆ ೧ ಕೋಟಿ ರೂ.ವರೆಗಿನ ಹೂಡಿಕೆ ಮತ್ತು ೫ ಕೋಟಿಗಿಂತ ಕಡಿಮೆ ವಹಿವಾಟು ಹೊಂದಿರುವ ಘಟಕಗಳ ಹೂಡಿಕೆಯ ಮಿತಿ ೧೦ ಕೋಟಿ ರೂ.ಆಗಿದೆ. ವಹಿವಾಟು ೫೦ ಕೋಟಿಗಿಂತ ಕಡಿಮೆಯಿದೆ. ೧೦೦ ಕೋಟಿಗಿಂತ ಕಡಿಮೆ ವಹಿವಾಟು ಹೊಂದಿರುವ ಘಟಕ ೨೦ ಕೋಟಿ ರೂ.ವರೆಗಿನ ಹೂಡಿಕೆ ಹೊಂದಿದ್ದರೆ ಅದನ್ನು ಮಧ್ಯಮ ಎಂದು ಕರೆಯಲಾಗುತ್ತದೆ.
ಕ್ರಿಸಿಲ್ ವರದಿಯ ಪ್ರಕಾರ ಎಂಎಸ್‌ಎಂಇಗಳ ಕಾಲು ಭಾಗಕ್ಕಿಂತ ಹೆಚ್ಚು ಸಾಂಕ್ರಾಮಿಕ ರೋಗದಿಂದಾಗಿ ಶೇಕಡಾ ೩ ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲು ಕಳೆದುಕೊಂಡಿದೆ. ೨೦೨ ಕ್ಕೆ ಹೋಲಿಸಿದರೆ, ೨೦೨೧ರ ಹಣಕಾಸು ವರ್ಷದಲ್ಲಿ ಸರಕುಗಳ ಬೆಲೆಗಳಲ್ಲಿ ತೀವ್ರ ಏರಿಕೆಯಿಂದಾಗಿ ಅರ್ಧದಷ್ಟು ಜನರು ನಷ್ಠ ಅನುಭವಿಸಿದ್ದಾರೆ.
“ಸರ್ಕಾರಿ ವಲಯಕ್ಕೆ ಪಾವತಿಸಬೇಕಾದ ಪಾವತಿ ಖಚಿತಪಡಿಸಿಕೊಳ್ಳುವುದು ಸುಲಭ ಆದರೆ ಖಾಸಗಿ ವಲಯದ ಬಾಕಿ ಗುರುತಿಸುವುದು ಕಷ್ಟಸಾಧ್ಯ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದರು.