ಎಂಎಲ್ ಸಿ ಚುನಾವಣೆ ಬಿಜೆಪಿ ಅಭ್ಯರ್ಥಿ ಖಾಲಿ ಹುದ್ದೆಗಳ ಭರ್ತಿಗೆ ಕೂಗು ನನ್ನದು ನಿರಂತರ: ಅಮರನಾಥ ಪಾಟೀಲ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.13: ಖಾಲಿ ಹುದ್ದೆಗಳ ಭರ್ತಿಗೆ ಕೂಗು ನನ್ನದು ನಿರಂತರ ಎಂದು ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಹೇಳಿದ್ದಾರೆ‌
ಅವರು ಇಂದು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ, 2009 ರಲ್ಲಿ ಹೆಚ್.ಕೆ.ಡಿ.ಬಿಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೆ.  2012 ರಿಂದ 18 ವರೆಗೆ ಇದೇ ಕ್ಷೇತ್ರದಿಂದ ಬಜೆಪಿಯಿಂದಲೇ ಸದಸ್ಯನಾಗಿ ಆಯ್ಕೆಯಾಗಿದ್ದೆ. ಆಗ ಈ ಕ್ಷೇತ್ರದಲ್ಲಿನ ಪದವೀಧರ ಮತದಾರರ ಸಮಸ್ಯೆಗಳನ್ನು ಸದನದಲ್ಲಿ ಮಂಡಿಸುವ ಕಾರ್ಯ ಮಾಡಿದ್ದೆನೆಂದರು.
371 ಜೆ. ನ ಮೀಸಲಾತಿ ಪರಿಣಾಮಕಾರಿಯಾಗಿ ಅನುಷ್ಟಾನವಾಗಬೇಕು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯೂ ಆಗಬೇಕಿದೆ.‌
ಸರ್ಕಾರ ಮತ್ತು ಖಾಸಗಿ ಶಿಕ್ಷಣ ಕ್ಷೇತ್ರದ ಬೆಳವಣಿಗೆಯೂ ಅಗತ್ಯ ವಿದೆ. ಆ ದಿಶೆಯಲ್ಲಿ ಸದನದಲ್ಲಿ ಹೋರಾಟ ಮಾಡುವೆ ಎಂದರು.
ಕಳೆದ ಬಾರಿ ಪಕ್ಷ ನನಗೆ ಟಿಕೆಟ್ ನೀಡದೆ ಬಳ್ಳಾರಿ ಜಿಲ್ಲೆಯ ಅಭ್ಯರ್ಥಿಗೆ ಅವಕಾಶ ನೀಡಿತ್ತು. ಆದರೂ ಅವರ ಆಯ್ಕೆಗೆ ಶ್ರಮಿಸಿದರೂ, ಅವರು ಆಯ್ಕೆಯಾಗಲಿಲ್ಲ. ಈ ಬಾರಿ ಮತ್ತೆ ಪಕ್ಷ ನನಗೆ ಅವಕಾಶ ನೀಡಿದೆ ಮತದಾರರು ನನಗೆ ಬೆಂಬಲಿಸಿ ಮತ ನೀಡಬೇಕು
ನಿರುಧ್ಯೋಗದ ಬಗ್ಗೆ ವಿರೋಧ ಪಕ್ಷಗಳು ಆರೋಪ ಮಾಡುತ್ತಲೇ, ಆದರೆ ದೇಶದಲ್ಲಿ ಮೂಲಭೂತ ಸೌಲಭ್ಯಗಳನ್ನೂ ಸೃಷ್ಟಿ ಮಾಡುವ ಮೂಲಕ ಉದ್ಯೋಗ ದೊರಕಿಸುವ ಕೆಲಸ ಮಾಡಿದೆ.  ರಾಜ್ಯದಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಕೂಗು ನನ್ನದು ನಿರಂತರ ಎಂದರು.
ಈ ಹಿಂದಿನ ನನ್ನ ಕೆಲಸದಿಂದ ನೋಡಿರುವ ಈ ಭಾಗದ ಮತದಾರರಿಂದ ಸ್ಥಳೀಯ ಅಭ್ಯರ್ಥಿಯನ್ನು ಎದಿರಿಸುವೆ. ನಿಮಗೆ ಲಭ್ಯವಾಗುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕೆಲಸ ಆಗಲಿ ಎಂದು ಮನವಿ ಮಾಡಿದರು
ಸುದ್ದಿಗೋಷ್ಟಿಯಲ್ಲಿ ಪಕ್ಷದ ಹಿರಿಯ ಮುಖಂಡ ಡಾ.ಎಸ್.ಜೆ.ವಿ‌.ಮಹಿಪಾಲ್, ಕೆ.ಎ.ರಾಮಲಿಂಗಪ್ಪ,
ಎಸ್.ಗುರುಲಿಂಗನಗೌಡ, ಗುತ್ತಿಗನೂರು ವಿರೂಪಾಕ್ಷಗೌಡ, ಗೋನಾಳ್ ಮುರಹರಗೌಡ, ವೀರಶೇಖರರೆಡ್ಡಿ, ಡಾ.ಬಿ.ಕೆ.ಸುಂದರ್, ಗಣಪಾಲ್ ಐನಾಥ ರೆಡ್ಡಿ,  ಬಿಜೆಪಿ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮೀನಳ್ಳಿ ತಾಯಣ್ಣ ಮೊದಲಾದವರು ಇದ್ದರು.