ಎಂಎಲ್ ಸಿ ಚುನಾವಣೆ ಏಚರೆಡ್ಡಿ ಸತೀಶ್ ಗೆ ಬಿಜೆಪಿ ಟಿಕೆಟ್ ಘೋಷಣೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.20: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ‌ ಸದಸ್ಯತ್ವಕ್ಕೆ ಡಿ.10 ರಂದು ನಡೆಯುವ ಚುನಾವಣೆಗೆ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ವೈ.ಎಂ ಸತೀಶ್(ಏಚರೆಡ್ಡಿ ಸತೀಶ್) ಅವರನ್ನು ತನ್ನ ಅಭ್ಯರ್ಥಿಯನ್ಮಾಗಿ ಭಾರತೀಯ ಜನತಾ ಪಾರ್ಟಿ ಘೋಷಣೆ ಮಾಡಿದೆ.
ಈ ವರೆಗೆ ಎಂಎಲ್ ಸಿ ಚುನಾವಣೆಯ ಅಭ್ಯರ್ಥಿ ಇವರೆಂದು ಎಲ್ಲೂ ಚರ್ಚೆ ಆಗಿರಲಿಲ್ಲ. ಆದರೆ ಪಕ್ಷದ ವರಿಷ್ಟ ನಾಯಕರಲ್ಲಿ ಒಬ್ಬರಾಗಿರುವ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಸಂತೋಷ್ ಅವರ ಮಾರ್ಗದರ್ಶನದಂತೆ ಸತೀಶ್ ಅವರು ಟಿಕೆಟ್ ಕೇಳಿ ನೇರವಾಗಿ  ಪಕ್ಷದ ರಾಜ್ಯ ಕಚೇರಿಯಲ್ಲಿಯೇ ಅರ್ಜಿ ಸಲ್ಲಿಸಲಾಗಿತ್ತು.
ಈ‌ಬಗ್ಗೆ ನ 11 ರಂದು ಮೊದಲ ಬಾರಿಗೆ ಸತೀಶ್ ಅವರು ಸ್ಪರ್ಧೆಗೆ ಮುಂದಾಗಿದ್ದಾರೆಂದು. ನ 13 ರಂದು ಸತೀಶ್ ಅವರಿಗೆ ಟಿಕೆಟ್ ಖಚಿತ. ಈ ಬಾರಿ ಕಾಂಗ್ರೆಸ್ ನ ಕೆ.ಸಿ.ಕೊಂಡಯ್ಯ ಮತ್ತು ಇವರ ನಡುವೆ ಸ್ಪರ್ಧೆ ಎಂದು ಸಂಜೆವಾಣಿ ಪ್ರಕಟಿಸಿತ್ತು.
ಗಣಿ ಉದ್ಯಮಿ, ವ್ಯವಹಾರಸ್ಥ, ಸಮಾಜ ಸೇವಕರೂ ಆಗಿರುವ  ವೀರಶೈವ ಲಿಂಗಾಯತ ರೆಡ್ಡಿ ಸಮುದಾಯದ ಏಚರೆಡ್ಡಿ ಸತೀಶ್ ಅವರ ಮನೆತನದ ಹಿರಿಯರು ಸಹ ಬಿಜೆಪಿಯಲ್ಲಿದ್ದವರು.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಬಡ ಜನತೆಗೆ ಶಿಕ್ಷಣ ದೊರೆಯಬೇಕೆಂದು ಜಿಲ್ಲೆಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಸಂಸ್ಥಾಪಕರಲ್ಲಿ ಪ್ರಮುಖರಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಇವರ ತಾತಾನವರು.
ಸತೀಶ್ ಅವರು ವೈ  ಮಹಾಬಲೇಶ್ವರಪ್ಪ ಅವರ ಮೂರು ಜನ‌ ಗಂಡು ಮಕ್ಕಳಲ್ಲಿ ಒಬ್ಬರಾದ ಬಸವರಾಜಪ್ಪ‌ಅವರ ಪುತ್ರರಾಗಿದ್ದಾರೆ.
ಮಹಾಬಲೇಶ್ವರಪ್ಪ ಅವರು ಯಾವಾಗಲೂ  ಕಾಂಗ್ರೆಸ್ ವಿರೋಧಿಗಳಾಗಿದ್ದವರು. ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ದ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದರು.   ಜಿಲ್ಲಾ ಬೋರ್ಡಿನ ಅಧ್ಯಕ್ಷರಾಗಿ‌ ಬಳ್ಳಾರಿ ನಗರ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದವರು. ಅವರ ಮಗ ವೈ. ಚಂಗಳಪ್ಪ ಅವರು  ಸಹ ಬಿಜೆಪಿಯಲ್ಲಿದ್ದು ಈ ಪಕ್ಷದಿಂದಲೇ ಬಳ್ಳಾರಿ ಕ್ಷೇತ್ರದಿಂದ ವಿಧಾನಸಭೆಗೆ  ಸ್ಪರ್ಧೆ ಮಾಡಿದ್ದರು.
ಈ ವರೆಗೆ ಬಿಜೆಪಿ ಪಕ್ಷದ ನೇರ ಕಾರ್ಯ ಚಟುವಟಿಕೆಗಳಿಂದ ದೂರ ಇದ್ದರೂ ಪಕ್ಷದ ಹಿತಚಿಂತಕರಾಗಿದ್ದರು. ಆರ್.ಎಸ್.ಎಸ್ ನ ಉನ್ನತ ನಾಯಕರ ಸಂಪರ್ಕ,‌ಪಕ್ಷ ನಿಷ್ಠೆ, ಸಮಾಜ ಸೇವೆ ಅವರನ್ನು ಟಿಕೆಟ್ ಹುಡಿಕಿಕೊಂಡು ಬಂದಿದೆ ಎನ್ನಬಹುದು. ಮಂಗಳವಾರ ನ.23ರಂದು ನಾಮಪತ್ರ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
Attachments area