ಎಂಎನ್ ದೇಸಾಯಿ ಕಾಲೇಜು; ಸಂವಿಧಾನದ ಅರಿವು ಉಪನ್ಯಾಸ ಮಾಲೆ

ಕಲಬುರಗಿ,ಜು 15:ಭಾರತದ ಸಂವಿಧಾನ 1950ರ ಜನೆವರಿ 26 ರಂದು ಜಾರಿಗೆ ಬಂದಿದ್ದು ಇಂದು ನಾವು 75 ಆಜಾದಿ ಅಮೃತ ಮಹೋತ್ಸವ ಆಚರಣೆಯನ್ನು ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಅತ್ಯವಶ್ಯಕ. ಸಂವಿಧಾನದಿಂದಲೇ ಎಲ್ಲಾ ಪ್ರಜೆಗಳಿಗೂ ಹಕ್ಕುಗಳನ್ನು ಸಾಧ್ಯ ಎಂದು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ನಮಗಾಗಿ ಇಂದು ವಿಶ್ವದಲ್ಲೇ ಅತೀ ಬೃಹತ್ ಲಿಖಿತ ಸಂವಿಧಾನವನ್ನು ನಮಗಾಗಿ ನೀಡಿದ್ದಾರೆ. ಆದಕಾರಣ ಈ ಸಂವಿಧಾನ ಅರಿವು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅವಶ್ಯಕ ಎಂದು ಗುರುಲಿಂಗಯ್ಯ ಸ್ವಾಮಿ ಹೇಳಿದರು. ಅವರು ಎಂ ಎನ್ ದೇಸಾಯಿ ಪದವಿ ಮಹಾವಿದ್ಯಾಲಯದವರು ಶಹಾಬಾದ ತಾಲೂಕು ಮರತೂರು ಗ್ರಾಮದ ವಿಜ್ಞಾನೇಶ್ವರ ಭವನದಲ್ಲಿ ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದರು.ಸಂವಿಧಾನದ 32ನೇ ವಿಧಿ ಸಂವಿಧಾನಾತ್ಮಕ ಹಕ್ಕು ಬಹಳ ಪ್ರಾಮುಖ್ಯತೆ ಹೊಂದಿದೆ. ಜನಾಂಗ, ಜಾತಿ, ಭಾಷೆ, ಬಣ್ಣ, ಧರ್ಮ, ಜನ್ಮಸ್ಥಳ ಮತ್ತು ಲಿಂಗವನ್ನು ಲೆಕ್ಕಿಸದೆ ಪ್ರತಿಯೊಂದು ಅಂಶದಲ್ಲಿ ಸಮಾನತೆಯನ್ನು ನೀಡುವ ಹಕ್ಕಾಗಿದೆ. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಶಿಬಿರಾರ್ಥಿಗಳು ಭಾಗವಹಿಸುವುದರ ಮೂಲಕ ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಅರಿಯಲು ಸಾಧ್ಯವಾಗುತ್ತದೆ. ರಾಷ್ಟ್ರಪ್ರೇಮ, ಸಂಸ್ಕøತಿ, ಗ್ರಾಮೀಣ ಜೀವನ, ಪರಂಪರೆ ಅರಿವು ಮೂಡಲು ರಾಷ್ಟ್ರೀಯ ಸೇವಾ ಯೋಜನೆ ಸಹಾಯವಾಗುತ್ತದೆ ಎಂದರು. ಮರತೂರು ಗ್ರಾಮದ ಐತಿಹಾಸಿಕತೆ ಬಗ್ಗೆ ಇಲ್ಲಿನ ವೈಶಿಷ್ಟ್ಯತೆಯ ಬಗ್ಗೆ ಹಾಗೂ ಮಿತಾಕ್ಷರ ಸಂಹಿತೆಯ ನಮ್ಮ ಕಾನೂನು ರಚನೆಯಲ್ಲಿ ಪ್ರಮುಖ ಪಾತ್ರದ ಕುರಿತು ಇನ್ನೋರ್ವ ಅತಿಥಿ ಕೆ. ಎಮ್. ವಿಶ್ವನಾಥ್ ಅವರು ಶಿಭಿರಾರ್ಥಿಗಳಿಗೆ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಾಜ್ ಪಟ್ಟಣಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಮ್.ಎನ್.ದೇಸಾಯಿ ಪದವಿ ಮಹಾವಿದ್ಯಾಲಯದ ಕಾರ್ಯದರ್ಶಿ ಜಗನ್ನಾಥ ನಾಗೂರ್ , ಪೆÇ್ರೀ. ವಿ.ಎಮ್.ಹಿರೇಮಠ, ಶರಣಪ್ಪ ಪೂಜಾರಿ, ಆನಂದತೀರ್ಥ ಜೋಷಿ, ಸಾಗರ ಜಮಾದಾರ, ಪರಶುರಾಮ ಜಾಧವ, ಸಂತೋಷಕುಮಾರ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಚಂದ್ರಶೇಖರ ಆಜಾದ್ ತಂಡದವರು ನಿರ್ವಹಿಸಿಕೊಟ್ಟರು.