ಎಂಎನ್‌ಎಸ್ ಕಂಟಿನೆಂಟಲ್ ಹೈಸ್ಕೂಲ್‌ನಿಂದ ಕಾರ್ಗಿಲ್ ವಿಜಯ ದಿವಸ ಆಚರಣೆ


ದಾವಣಗೆರೆ.ಜು.೨೮; ನವೋದಯ ವಿದ್ಯಾಸಂಸ್ಥೆಯ ಎಂ.ಎನ್.ಎಸ್. ಕಂಟಿನೆಂಟಲ್ ಹೈಸ್ಕೂಲ್ ವತಿಯಿಂದ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ನಗರದ ಕರ್ನಲ್ ವೀರಚಕ್ರ ವೃತ್ತದ ಬಳಿಯಿರುವ ಅಮರ್ ಜವಾನ್ ಉದ್ಯಾನವನದಲ್ಲಿ ಕಾರ್ಗಿಲ್ ವಿಜಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಪಾಲಿಕೆ ಸದಸ್ಯ ಪೈಲ್ವಾನ್ ವೀರೇಶ್, ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್, ಪಿ.ಸಿ. ಶ್ರೀನಿವಾಸ್, ಎನ್. ರಾಜಶೇಖರ್, ಸತ್ಯ ಪ್ರಕಾಶ್, ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಕಾರ್ಕಳದ ಸಾಮಾಜಿಕ ಕಾರ್ಯಕರ್ತ ಆದರ್ಶ ಗೋಖಲೆ, ಶಾಲೆಯ ಸಂಯೋಜಕರಾದ ಸಹನಾ ಸಂತೋಷ್ ಕುಮಾರ್, ಪ್ರಾಂಶುಪಾಲರಾದ ವಾಣಿ ಗುಜ್ಜರ್, ಮುಖ್ಯೋಪಾಧ್ಯಾಯರಾದ ಗಾಯತ್ರಿ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ವರ್ಗದವರು ಹಾಜರಿದ್ದರು.