ಎಂಎಂಸಿಯಿಂದ ಕೋವಿಡ್ ಕೇರ್ ಸೆಂಟರ್ ಆರಂಭ

ವಿಜಯಪುರ, ಮೇ.30-ನಗರದ ಮುಸ್ಲಿಂ ಮುತ್ತಹಿದ್ ಕೌನ್ಸಿಲ್ ವತಿಯಿಂದ ನಗರದ ತೇಕಡೆ ಗಲ್ಲಿಯಲ್ಲಿರುವ ಮೈನಾರಿಟಿ ಹಾಸ್ಟೆಲ್‍ನಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ.
ಕೋವಿಡ್ ಕೇರ್ ಸೆಂಟರ್‍ಗೆ ಶನಿವಾರ ಭೇಟಿ ನೀಡಿದ ಸೈಯದ್ ಮೊಹಮ್ಮದ್ ತನ್ವಿರ್ ಪೀರಾ ಹಾಶ್ಮಿ, ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಹಾಗೂ ಲೊಯೊಲಾ ಶಾಲೆ ಫಾದರ್ ಮಾತನಾಡಿ, ಸದ್ಯಕ್ಕೆ 25 ಹಾಸಿಗೆಯುಳ್ಳ ಕೋವಿಡ್ ಸೆಂಟರ್‍ನ್ನು ಸೋಮವಾರದಿಂದ ಆರಂಭಿಸಲಾಗುವುದು. ಈ ಕೇಂದ್ರದಲ್ಲಿ ದಾಖಲಾಗುವ ರೋಗಿಗಳಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಲಿದ್ದಾರೆ ಹಾಗೂ ರೋಗಿಗಳಿಗೆ ಊಟ ಮತ್ತು ಚಹಾವನ್ನು ನೀಡಲಾಗುವುದು ಎಂದು ತಿಳಿಸಿದರು.
ಕೋವಿಡ್‍ನ ಪ್ರಾಥಮಿಕ ಸೋಂಕಿತರು ಕೇಂದ್ರದಲ್ಲಿ ದಾಖಲಾಗಿ, ಸೂಕ್ತ ಚಿಕಿತ್ಸೆ ಪಡೆಯಲು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಅಬ್ದುಲ್ ರಜಾಕ್ ಹೊರ್ತಿ, ಮೈನುದ್ದೀನ್ ಅಗಸಬಾಳ, ಮ್ಯಾಶಾಳಕರ್, ಬಂದೇನವಾಜ್, ಫಾರೂಕ್, ಪಾಪಾ ಪೀರಜಾದೆ ಮತ್ತಿತರರು ಇದ್ದರು.