ಹೆಣ್ಣುಮಕ್ಕಳಲ್ಲಿನ ಋತುಸ್ರಾವದ ಕುರಿತು ಅರಿವು ಮೂಡಿಸುವ “ಋತು'” ಕಿರುಚಿತ್ರ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯ ವಿದ್ಯಾರ್ಥಿಗಳು ಸೇರಿ ಮಾಡಿರುವ ಕಿರುಚಿತ್ರ ಇದು.
ನಿರ್ದೇಶಕ ಸಮರ್ಥ ನಾಗರಾಜ್ =ನಿರ್ದೇಶನ ಮಾಡಿರುವ ಕಿರುಚಿತ್ರವನ್ನು ವೀಕ್ಷಿಸಿದ ನಾಗತಿಹಳ್ಳಿಚಂದ್ರಶೇಖರ್ , ವಿದ್ಯಾರ್ಥಿಗಳ ಶ್ರಮ ಕೊಂಡಾಡಿ ಇನ್ನಷ್ಟು ಈ ಮಾದರಿಯ ಚಿತ್ರ ಮಾಡಲಿ ಎಂದರು.
ಚಂದ್ರಯಾನ- 3 ರಾಕೆಟ್ ಉಡಾವಣೆ ಮಾಡುವ ವಿಜ್ಞಾನದ ಕಾಲದಲ್ಲಿ ಗ್ರಾಮೀಣ ಹಾಗು ಹಳ್ಳಿಯ ಪ್ರದೇಶಲ್ಲಿ ಗಗನಳಂತಹ ಅನೇಕ ಹೆಣ್ಣು ಮಕ್ಕಳಿಗೆ ಅರಿವು, ಜ್ಞಾನ ಇರುವುದಿಲ್ಲ . ಅರಿವು ಮೂಡಿಸುವ ಕೆಲಸ ಮಾಡಲಿ ಎಂದು ಹಾರೈಸಿದರು.
ನಟಿ ಮಯೂರಿ ಕ್ಯಾಥರೀನ್ ಮಾತನಾಡಿ, ಹೆಣ್ಣಾಗಿ ಹುಟ್ಟುವುದೇ ಪುಣ್ಯ. ಕಿರುಚಿತ್ರಕ್ಕೆ ಒಳ್ಳೆಯದಾಗಲಿ ಎಂದರು. ನಿರ್ದೇಶಕ ಸಮರ್ಥ ನಾಗರಾಜ್ ಮಾತನಾಡಿ, ಮುಟ್ಟಿನ ಬಗ್ಗೆ ಕೀಳರಿಮೆ ಬೇಡ ಎನ್ನುವ ಅರಿವು ಮೂಡಿಸುವುದು ನಮ್ಮ ಉದ್ದೇಶ .
ಹಿರಿಯ ನಟಿ ಅಪೂರ್ವ ಮಾತನಾಡಿ, ಟೀಮ್ ಅಂದುಕೊಂಡರೆ ಕೆಲಸ ಮಾಡುವುದು ಖುಷಿಯಾಗಲಿದೆ. ತಂಡದಲ್ಲಿ ಉತ್ತಮ ಭಾವನೆ ಕಥೆ, ಚೆನ್ನಾಗಿತ್ತು. ಎಲ್ಲಾ ಕಡೆ ಸರಿಯಾಗಿ ನೊಡಿಕೊಳ್ಳುವುದು. ಆದರೂ ನಮ್ಮ ತನ ಯಾವುದು ಬಿಡಬಾರದು. ಹತ್ತು ಜನಕ್ಕೆ ಒಳ್ಳೆಯ ವಿಷಯ ಒಳ್ಳೆಯದಾಗಲಿ ಎಂದರು. ಕಿರುಚಿತ್ರಕ್ಕೆ ನಿರ್ಮಾಪಕ ನಾಗರಾಜ್ ಬಂಡವಾಳ ಹೂಡಿದ್ದಾರೆ. ಹನುಮಂತೇಗೌಡ, ಆದರ್ಶ್ ಈಶ್ವರಪ್ಪ ಸಂಕಲನ ಮಾಡಿದ್ದಾರೆ. ಮುಖ್ಯಪಾತ್ರ ಗಗನ ಹಂಚಿಕೊಂಡರು.