ಊಹಾಪೋಹಗಳಿಗೆ ಕಿವಿಗೊಡಬೇಡಿ

ಬಾದಾಮಿ,ಜ13: ಬಾದಾಮಿ ಕ್ಷೇತ್ರದಿಂದ ಬಿಜೆಪಿ ಪಕ್ಷದ ವರಿಷ್ಟರು ಅಭ್ಯರ್ಥಿ ಯಾರನ್ನು ಸೂಚಿಸಿದರೂ ನಾವು ಹೊಂದಾಣಿಕೆ ಮೂಲಕ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ. ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಉಹಾ ಪೋಹಗಳಿಗೆ ಕಿವಿಗೊಡಬೇಡಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಹೇಳಿದರು.
ಅವರು ತಾಲೂಕಿನ ಚೊಳಚಗುಡ್ಡ ಮತ್ತು ಹೊಸೂರ ಗ್ರಾಮದಲ್ಲಿ ಬೂತ ವಿಜಯ ಸಂಕಲ್ಪ ಯಾತ್ರೆ ಪ್ರಯುಕ್ತ ಅಧ್ಯಕ್ಷ ಸದಸ್ಯರ ಮನೆ ಮೇಲೆ ಬಿಜೆಪಿ ಬಾವುಟ ಹಾರಿಸಿದ ನಂತರ ಕೋರೆಪ್ಪಜ್ಜನಮಠದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಗುರುಪಾದಪ್ಪ ವಾಲಿ, ರಾಚಪ್ಪ ಹಾದಿಮನಿ, ಶರಣಗೌಡ ಪಾಟೀಲ, ಕುಬೇರಗೌಡ ಪಾಟೀಲ, ಚನ್ನಪ್ಪ ವಾಲಿ, ವೀರಣ್ಣ ಸಾತನ್ನವರ, ರಮೇಶ ಹಾದಿಮನಿ, ಬಸು ಹಂಪಿಹೊಳಿ, ವೀರಣ್ಣ ಭದ್ರಗೌಡ, ಮೌನೇಶ ಬಡಿಗೇರ, ಮುತ್ತಣ್ಣ ಹುಂಬಿ, ಮನೋಹರ ಈಳಗೇರ, ಪ್ರಕಾಶ ಧನ್ನೂರ, ಬಸವರಾಜ ಪಾಟೀಲ, ಉಮೇಶಪ್ಪ ಅಂಗಡಿ, ಶರಣಪ್ಪ ಹೂಗಾರ, ಕಿರಣ ಕುಲಕರ್ಣಿ, ಬಸವರಾಜ ಜವಳಗದ್ದಿ, ನಾಗೇಶ ಅಕ್ಕಿ, ಬಿ.ಎಚ್.ಬಿಳೆಕಲ್, ಸಿದ್ದನಗೌಡ ನೀರಲಗಿ, ಶರಣಪ್ಪ ಹಂಚಿನಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.