ಊಹಾಪೆಹ ಚರ್ಚೆಗೆ ಅವಕಾಶ ಬೇಡ: ಶ್ರೀನಿವಾಸ್‍ಪ್ರಸಾದ್

ಚಾಮರಾಜನಗರ, ಜೂ.10- ಸಿಎಂ ಬದಲಾವಣೆ ಊಹಾಪೆÇೀಹದಿಂದ ನಡೆಯುವಂತದಲ್ಲ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಅವರು ಕೊಳ್ಳೇಗಾಲದ ಉಪವಿಭಾಗಧಿಕಾರಿ ಕಚೇರಿಯಲ್ಲಿ ಕೋವಿಡ್ ನಿರ್ವಹಣೆಯ ಬಗ್ಗೆ ಟಾಸ್ಕ್ ಫೆÇೀರ್ಸ್ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ ಮುಖ್ಯ ಮಂತ್ರಿಗಳೇ ಖುದ್ದು ಹೇಳಿದ್ದಾರೆ. ಊಹಾಪೆÇೀಹ ಚರ್ಚೆಗೆ ಅವಕಾಶ ಬೇಡ ಎಂದು ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟಿಲ್ ಕೂಡ ಹೇಳಿದ್ದು, ಈ ವಿಚಾರ ಹೈಕಮಾಂಡ್ ಗಮನದಲ್ಲಿದೆ. ಈ ಬಗ್ಗೆ ನನ್ನ ಅಭಿಪ್ರಾಯ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆಕ್ಸಿಜನ್ ದುರಂತದಲ್ಲಿ ಮಡಿದವರಿಗೆ 2 ಲಕ್ಷ ರೂ. ಪರಿಹಾರ: ಸರ್ಕಾರ ನ್ಯಾಯಾಲಯದ ಆದೇಶದಂತೆ ಆಕ್ಸಿಜನ್ ದುರಂತದಲ್ಲಿ ಸಾವಿಗೀಡಾದವರಿಗೆ ತಾತ್ಕಾಲಿಕವಾಗಿ ತಲಾ 2 ಲಕ್ಷ ರೂಗಳನ್ನು ಈಗಾಗಲೇ ನೀಡಿಯಾಗಿದೆ. ಇನ್ನೂ ಹೆಚ್ಚಿನ ಪರಿಹಾರ ನೀಡುವುದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದರು. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಡಿಮೆಯಾಗುತ್ತಿದೆ. ಡೆತ್ ರೇಟ್ ಪ್ರಮಾಣವು ಕುಗ್ಗಿದೆ. ಜೂ.15 ರ ಒಳಗಾಗಿ ಕೊರೊನಾ ನಿಯಂತ್ರಣಕ್ಕೆ ಬರುತ್ತದೆ. ಈಗಾಗಲೇ ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ವೈದ್ಯಕೀಯ ಕ್ಷೇತ್ರವು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೇಕಾದ ಹಾಸಿಗೆ, ಆಕ್ಸಿಜನ್, ಔಷಧೋಪಚಾರದಲ್ಲಿ ಕೊರತೆಯಿಲ್ಲ ಎಂದು ತಿಳಿಸಿದರು.
ಆಂಬುಲೆನ್ಸ್ ಸೇವೆಗೆ ಚಾಲನೆ: ಸಂಸದರ ನಿಧಿಯಿಂದ ಆಂಬುಲೆನ್ಸ್ ಖರೀದಿಸಿದ್ದು, ಕೊಳ್ಳೇಗಾಲ ಸುತ್ತಮುತ್ತಲಿನ ಜನರ ತುರ್ತು ಆರೋಗ್ಯ ಸೇವೆಗಾಗಿ ಪಟ್ಟಣದಲ್ಲಿರುವ ನಾರಾಯಣ ಮಲ್ಟಿಸ್ಟೆμÁಲಿಟಿ ಮಾಹಿತಿ ಕೇಂದ್ರಕ್ಕೆ ಉಚಿತ ಆಂಬುಲೆನ್ಸ್ ಸೇವೆಯನ್ನು ಶ್ರೀನಿವಾಸ್ ಪ್ರಸಾದ್ ಒದಗಿಸಿದ್ದಾರೆ.