ಊರ್ವಶಿ ಸೇರಿ ಮೂವರು ಸೆಲೆಬ್ರಿಟಿಗಳಿಗೆ ನೋಟಿಸ್

ನವದೆಹಲಿ,ಏ.೮- ಗೇಮಿಂಗ್ ಕಂಪನಿ ಲೋಟಸ್ ೩೬೫ ಮತ್ತು ಕಂಪನಿ ಪರ ಪ್ರಚಾರ ನಡೆಸಿದ್ದಕ್ಕಾಗಿ ನಟರಾದ ನವಾಜುದ್ದೀನ್ ಸಿದ್ದಿಕ್ ಮತ್ತು ಊರ್ವಶಿ ರೌಟೇಲಾ ಸೇರಿದಂತೆ ಮೂವರು ಸೆಲೆಬ್ರಿಟಿಗಳಿಗೆ ಗ್ರಾಹಕ ರಕ್ಷಣಾ ಕಾವಲು ಸಮಿತಿ ನೋಟಿಸ್ ಜಾರಿ ಮಾಡಿದೆ.

ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಸಂಸ್ಥೆ ಮತ್ತು ಸೆಲೆಬ್ರಿಟಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಪ್ರತಿಕ್ರಿಯೆ ಕೇಳಿದೆ.

ಪತ್ರಿಕೆಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಕಟವಾದ ಜಾಹೀರಾತನ್ನು ಸಿಸಿಪಿಎ ಸ್ವಯಂ ಪ್ರೇರಿತವಾಗಿ ಪರಿಗಣಿಸಿದೆ ಎಂದು ಮೂಲಗಳು ತಿಳಿಸಿವೆ,

“೨೦೧೫ ರಿಂದ ಭಾರತದ ಅತ್ಯಂತ ವಿಶ್ವಾಸಾರ್ಹ ಕ್ರೀಡಾ ವಿನಿಮಯವಾಗಿದೆ” ಎಂದು ಸಂಸ್ಥೆ ಹೇಳಿಕೊಂಡಿದೆ.

ಇದುವರೆಗಿನ ಕಂಪನಿಯ ಎಲ್ಲಾ ತನ್ನ ಕ್ಲೈಮ್‌ಗಳ ಪುರಾವೆಗಳ ವಿವರಗಳನ್ನು ಒದಗಿಸುವಂತೆ ಕೇಳಲಾಗಿದೆ ಮತ್ತು ಅದನ್ನು ಅನುಮೋದಿಸುವ ಸೆಲೆಬ್ರಿಟಿಗಳನ್ನು ಅನುಮೋದಿಸುವ ಮೊದಲು ಕಂಪನಿಯ ಕ್ಲೈಮ್‌ಗಳು ಹೇಗೆ ಸರಿಯಾಗಿವೆ ಇಲ್ಲವೆ ಎನ್ನುವುದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದೆ.

ಕ್ಲೈಮ್‌ಗಳ ಪುರಾವೆಯ ವಿವರಗಳನ್ನು ಒದಗಿಸುವಂತೆ ಕೇಳಲಾಗಿದೆ ಮತ್ತು ಅದನ್ನು ಅನುಮೋದಿಸುವ ಸೆಲೆಬ್ರಿಟಿಗಳು ಕಂಪನಿಯ ಅಪರಾದ ಅನುಮೋದಿಸುವ ಮೊದಲು ಹೇಗೆ ಸರಿಯಾಗಿವೆ ಎಂದು ಅವರು ಕಂಡುಕೊಂಡಿದ್ದಾರೆ ಎಂದು ಪ್ರತಿಕ್ರಿಯಿಸಲು ಕೇಳಲಾಗಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಉತ್ಪನ್ನಗಳು ಅಥವಾ ಸೇವೆಗಳನ್ನು ಅನುಮೋದಿಸುವಾಗ “ನಿರ್ದಿಷ್ಟ ಶ್ರದ್ಧೆ”ಮತ್ತು ಬದ್ದತೆ ಕಾಯ್ದಕೊಳ್ಳುವಂತೆ ಸೆಲೆಬ್ರಿಟಿಗಳಿಗೆ ಸೂಚಿಸಿದೆ.