ಊರಹಬ್ಬ, ಗ್ರಾಮ ದೇವತೆಗಳಿಗೆ ದೀಪದಾರತಿ

ಆನೇಕಲ್.ಮೇ೧೫:ಮಂಚನಹಳ್ಳಿ ಗ್ರಾಮ ದೇವತೆಗಳ ಊರಹಬ್ಬ ಹಾಗೂ ಜೋಡಿ ಕರಗ ಮತ್ತು ಸಿಡೀರಣ್ಣ ಜಾತ್ರಾ ಮಹೋತ್ಸವ ಗ್ರಾಮಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.

ವಿಶೇಷವಾಗಿ ಮಹಿಳೆಯರು ಮಂಚನಹಳ್ಳಿ ಗ್ರಾಮ ದೇವತೆಗಳಿಗೆ ದೀಪದಾರತಿಯನ್ನು ಬೆಳಗಿದ ದೃಶ್ಯ ಕಂಡು ಬಂತು. ಹಾಗೆಯೇ ಕೀಲು ಕುದುರೆ, ಪಲ್ಲಕ್ಕಿ ಉತ್ಸವ, ಜೋಡಿ ಕರಗ ಮಹೋತ್ಸವ, ಮಾಯಸಂದ್ರ ಮುತ್ಯಾಲಮ್ಮ ದೇವಿಗೆ ದೀಪಗಳ ಆರತಿ ಕಾರ್ಯಕ್ರಮವು ಸಹ ಶ್ರದ್ದಾಭಕ್ತಿಯಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಮಂಚನಹಳ್ಳಿ ಗ್ರಾಮಸ್ಥರು, ಭಕ್ತರು ಬಾಗವಹಿಸಿದ್ದರು.