ಊದಿದ ತುಟಿಯಲ್ಲಿ ಉರ್ಫಿ ಸೆಲ್ಫಿ

ಮುಂಬೈ,ಏ.೧೭- ಸದಾ ಮೈಮೇಲೆ ಬಟ್ಟೆಯೇ ಇಲ್ಲದಂತೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿ ಪ್ರಚಾರ ಗಿಟ್ಟಿಸಿಕೊಂಡ ಹಿಂದಿ ಒಟಿಟಿ ಬಿಗ್ ಬಾಸ್ ಸ್ಪರ್ಧಿ ಊರ್ಫಿ ಜಾವೆದ್ ಈಗ ಊದಿದ ತುಟಿಗಳ ಸೆಲ್ಪಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಊರ್ಫಿಗೆ ಕೋವಿಡ್ ಸೋಂಕು ತಗುಲಿದೆಯಾ ಅಥವಾ ಇಲ್ಲವೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಆದರೆ ತನ್ನ ಊದಿದ ತುಟಿಗಳ ಚಿತ್ರವನ್ನು ಹಂಚಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಊದಿದ ಉಟಿ, ಮುರಿದ ಹೃದಯದ ಎಮೋಜಿಯೊಂದಿಗೆ ಅನಿಮೇಟೆಡ್ ನಕಲಿ ಎಕ್ಸ್-ರೇನೊಂದಿಗೆ ತನ್ನ ಎದೆ ಹಾಗೂ ದೇಹವನ್ನು ಮುಚ್ಚಿರುವುದನ್ನು ಪ್ರದರ್ಶಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ಅವರು ಪ್ರಸ್ತುತ ಅಸ್ವಸ್ಥರಾಗಿದ್ದಾರೆ ಮತ್ತು ಅವರು ವೈರಲ್ ಸೋಂಕಿನಿಂದ ಬಳಲುತ್ತಿದ್ದಾರೆ. ಅದು ಕೋವಿಡ್ ಸೋಂಕು ಇದೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ ಎನ್ನಲಾಗಿದೆ.
ಊದಿಕೊಂಡ ತುಟಿಗಳ ಸೆಲ್ಫಿಯನ್ನು ತನ್ನ ಇನ್‌ಸ್ಟಾಗ್ರಾಮ್ ಕಥೆಯಲ್ಲಿ ಹಂಚಿಕೊಂಡಿರುವ ಊರ್ಫಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ತನ್ನ ಅಭಿಮಾನಿಗಳೊಂದಿಗೆ ತಿಳಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದೇನೆ. ನನ್ನ ತುಟಿಗಳು ಬಾತುಕೋಳಿಯಂತೆ ಊದಿಕೊಳ್ಳುತ್ತವೆ. ಕೋವಿಡ್ ಹೈ ಯಾ ವೈರಲ್ “ಆಜ್ ಪತಾ ಚಲ್ ಜಾಯೇU” ಎಂದು ಬರೆದಿದ್ದಾರೆ.
ಚಿತ್ರದಲ್ಲಿ, ಉರ್ಫಿ ಒಂದು ಕೈಯಲ್ಲಿ ಕಾಫಿ ಕಪ್ನೊಂದಿಗೆ ಕನ್ನಡಿಯ ಮುಂದೆ ಸೆಲ್ಫಿ ತೆಗೆದುಕೊಳ್ಳುವುದನ್ನು ಕಾಣಬಹುದು. ಯಾವಾಗಲೂ ಹಾಗೆ, ಅಭಿಮಾನಿಗಳ ಬಳಗ ಪರ ವಿರೋಧದ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪುನರಾವರ್ತಿತ ಟ್ರೋಲ್‌ಗಳ ಹೊರತಾಗಿಯೂ, ಉರ್ಫಿ ವಿಚಲಿತಳಾಗಿದ್ದಾಳೆ ಮತ್ತು ಅವಳ ವಿರುದ್ಧ ಹಲವಾರು ಪೊಲೀಸ್ ದೂರುಗಳು ದಾಖಲಾಗಿದ್ದರೂ ಸಹ ಆಗಾಗ್ಗೆ ವಿಲಕ್ಷಣ ಬಟ್ಟೆಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.