ಊಟಿ: ಶಾಸಕರ ವಿಶೇಷ ಅನುದಾನದಡಿ ಹಸೇನ್ ಸಾಬ್ ದರ್ಗಾ ನಿರ್ಮಾಣ, ಉದ್ಘಾಟನೆ

ದೇವದುರ್ಗ,ಜು,೨೨- ತಾಲೂಕಿನ ಊಟಿ ಗ್ರಾಮದ ಹಿಂದೂ, ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಹಸೇನ್ ಸಾಬ್ ದರ್ಗಾವನ್ನು ಇತ್ತೀಚಿಗೆ ಉದ್ಘಾಟನೆ ಮಾಡಲಾಯಿತು.
ಶಾಸಕರ ವಿಶೇಷ ಅನುದಾನದಡಿಯಲ್ಲಿ ಸುಮಾರು ೫ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದ ದರ್ಗಾ ಕೆ.ಶಿವನಗೌಡ ನಾಯಕ ಅವರ ಮಾತೋಶ್ರೀಯಾದ ಶ್ರೀ ಮಹಾದೇವಮ್ಮ ನಾಯಕ ಹಾಗೂ ಮುಂಡರಗಿಯ ಶಿವಣ್ಣ ತಾತ ಅವರು ಜಂಟಿಯಾಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಜಂಬಣ್ಣ ನೀಲಗಲ್, ಬಸವರಾಜ ವಕೀಲರು ಗಾಣದಾಳ, ಗೌಡಪ್ಪಗೌಡ, ಅಮರೇಶ್ ಊಟಿ ಚನ್ನಬಸವ ಮ್ಯಾಕಲದೊಡ್ಡಿ, ಪೀರಸಾಬ್ ಸೇರಿದಂತೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು, ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.