ಊಟಿಯಲ್ಲಿ ಬಿಜೆಪಿ ಕಾರ್ಯಕರ್ತರ ಬಿರುಸಿನ ಪ್ರಚಾರ

ಮೈಸೂರು:ಏ:01: ತಮಿಳುನಾಡಿನ ಊಟಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಭೋಜರಾಜನ್ ಪರವಾಗಿ 28ನೇ ವಾರ್ಡ್ ನಲ್ಲಿ ಅತಿ ಹೆಚ್ಚು ಕನ್ನಡಿಗರಿರುವ ‘ಕನ್ನಡಿಗರ ಬಡಾವಣೆ’ ಯಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ರಾದ ಎಲ್. ನಾಗೇಂದ್ರ ಮತ್ತು ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ರವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಚುನಾವಣೆಯ ಪ್ರಚಾರ ಮಾಡಿ ಮತಯಾಚನೆ ಮಾಡಿದರು,
ಶಾಸಕರಾದ ಎಲ್ ನಾಗೇಂದ್ರ ರವರು ಮಾತನಾಡಿ ತಮಿಳುನಾಡು ಊಟಿ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡಿಗರು ಸಹ ಹೆಚ್ಚಿನ ಸಂಖ್ಯೆಯಲಿದ್ದಾರೆ ಮತ್ತು ಕರ್ನಾಟಕ ಭಾಗದ ಮೈಸೂರು ಚಾಮರಾಜನಗರ ಜಿಲ್ಲೆಯ ಗಡಿಭಾಗದೊಂದಿಗೆ ಉತ್ತಮ ಒಡನಾಟದಿಂದ ಭಾಂದವ್ಯದಲಿದ್ದಾರೆ, ಕೃಷಿ ಸಾರಿಗೆ ಪ್ರವಾಸೋದ್ಯಮದ ವಿಷಯದಲ್ಲಿ ನಿರಂತರ ಸಂಪರ್ಕದಲ್ಲಿ ಊಟಿಯ ಜನರು ಕರ್ನಾಟಕದಲ್ಲಿ ಪ್ರೀತಿ ವಿಶ್ವಾಸಗಳಿಸಿದ್ದಾರೆ, ಈಬಾರಿ ಬಿಜೆಪಿ ಪಕ್ಷಕ್ಕೆ ಹೆಚ್ಚು ಒಲವು ತೋರಿಸಿರುವ ತಮಿಳುನಾಡಿನಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ, ಜೆಎಸ್‍ಎಸ್ ಸಂಸ್ಥೆ ಶಾಲಾ ಕಾಲೇಜು ಸೇರಿದಂತೆ ಮಾರುಕಟ್ಟೆಗಳಲ್ಲಿ ಪ್ರಚಾರ ಉತ್ತಮವಾಗಿ ನಡೆಯುತ್ತಿದೆ ಎಂದರು
ಶಾಸಕರಾದ ಎಲ್ ನಾಗೇಂದ್ರ, ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಎಂ.ಎನ್. ನವೀನ್ ಕುಮಾರ್, ಲಕ್ಷ್ಮೀದೇವಿ, ವೇದರಾಜ್, ರಾಮಕೃಷ್ಣ, ವಿಕ್ರಂ ಅಯ್ಯಂಗಾರ್, ನರಸಿಂಹರಾಜ ಕ್ಷೇತ್ರದ ಯುವಮೋರ್ಚಾ ಅಧ್ಯಕ್ಷರಾದ ಲೋಹಿತ್, ನವೀನ್, ಸ್ಥಳೀಯ ಬಿಜೆಪಿ ಮುಖಂಡರಾದ ಸುಬ್ರಹ್ಮಣ್ಯ, ವಾಸು, ಫ್ರಾಂಕ್ಲಿನ್, ರಮೇಶ್, ಶಿವರಾಮನ್ ಹಾಗೂ ಇನ್ನಿತರರು ಹಾಜರಿದ್ದರು