ಊಟದ ಪೊಟ್ಟಣ, ನೀರಿನ ಬಾಟಲ್ ವಿತರಣೆ

ಬೀದರ:ಮೇ.29: ಕೋವಿಡ್-19 2ನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮೇ 10 ರಿಂದ ಜೂನ್ 7 ರವರೆಗೆ ಲಾಕ್‍ಡೌನ್ ಘೋಷಣೆ ಮಾಡಿದ ಹಿನ್ನಲೆಯಲ್ಲಿ ತೀವ್ರ ಸಂಕಷ್ಟದಲ್ಲಿರುವ ನಗರದ ಬ್ರೀಮ್ಸ ಬೋಧಕ ಆಸ್ಪತ್ರೆ ಹಾಗೂ ನಗರದ ವಿವಿಧ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್-19 ಸೋಂಕಿತ ರೋಗಿಗಳು ಹಾಗೂ ಕರೋನಾ ರೋಗಿಗಳ ಸಂಬಂಧಿಕರಿಗೆ ಭಾರತೀಯ ಜನತಾ ಪಾರ್ಟಿ ಎಸ್.ಟಿ. ಮೊರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾದ ಮಹೇಶ ಪಾಲಂ ಅವರ ನೇತೃತ್ವದಲ್ಲಿ ಊಟದ ಪಾಕೇಟ್‍ಗಳು ಹಾಗೂ ಕುಡಿಯುವ ನೀರಿನ ಬಾಟಲ್‍ಗಳು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಎಸ್.ಟಿ. ಮೋರ್ಚಾ ಬೀದರ ಜಿಲ್ಲಾ ಘಟಕದ ಅಧ್ಯಕ್ಷರಾದ ಮಹೇಶ ಪಾಲಂ ಅವರು ಮಾತನಾಡುತ್ತ, ರಾಜ್ಯ ಸರ್ಕಾರದ ಹಾಗೂ ಬಿಜೆಪಿ ರಾಜ್ಯ ಘಟಕದ ಆದೇಶದ ಮೇರೆಗೆ ಲಾಕ್‍ಡೌನ್‍ನಿಂದ ಬಹಳ ಸಂಕಷ್ಟದಲ್ಲಿರುವ ಕೋವಿಡ್ ಸೋಂಕಿತರು ಹಾಗೂ ಚಿಕಿತ್ಸೆ ಕೊಡಿಸಲು ರೋಗಿಗಳ ಜೊತೆ ಬಂದಿರುವ ಸಂಬಂಧಿಕರಿಗೆ ಬೀದರ ನಗರದ ಬ್ರೀಮ್ಸ್ ಬೋಧಕ ಆಸ್ಪತ್ರೆ ಹಾಗೂ ಬೀದರ ನಗರದ ವಿವಿಧ ಕೋವಿಡ್ ಕೇರ್ ಸೆಂಟರ್‍ಗಳಿಗೆ ಹೋಗಿ ಊಟದ ಪಾಕೇಟ್‍ಗಳು ಹಾಗೂ ಕುಡಿಯುವ ನೀರಿನ ಬಾಟಲ್ ವಿತರಣೆ ಮಾಡಲಾಗಿದ್ದು ನಿರಂತರವಾಗಿ ಒಂದು ವಾರ ಊಟ ಮತ್ತು ನೀರು ಕೊಡಲಾಗುವುದು ಎಂದರು.
ಜಿಲ್ಲಾ ಉಪಾಧ್ಯಕ್ಷರಾದ ರಾಜಕುಮಾರ ಜಮಾದಾರ್, ರವಿಂದ್ರ ಬಾಲೇಬಾಯಿ, ಜಿಲ್ಲಾ ಕಾರ್ಯದರ್ಶಿ ಮಾರುತಿ ಚಾಂಬೋಳ್, ಅರುಣ ಬಾವಗೆ, ಜಿಲ್ಲಾ ಖಜಾಂಚಿ ದೀಪಕ್ ಚಿದ್ರಿ, ಹುಮನಾಬಾದ ತಾಲೂಕಾ ಘಟಕದ ಅಧ್ಯಕ್ಷರಾದ ದಯಾನಂದ ಮೇತ್ರೆ, ಯುವ ಮುಖಂಡರಾದ ನೀತಿನ್, ನರೇಶ, ಅಭಿಶೇಕ, ನಾಗೇಂದ್ರ ಕಾವಳೆ, ಧನರಾಜ ಯರನಳ್ಳಿ, ಬಾಲಾಜಿ ಇತರರು ಇದ್ದರು.