ಊಟದ ಕೊಠಡಿಯನ್ನು ಸ್ವಚ್ಛವಾಗಿಟ್ಟುಕೊಳ್ಳಿ: ಶಾಸಕ ಚಿಮ್ಮನಕಟ್ಟಿ

ಗುಳೇದಗುಡ್ಡ,ಜೂ.21: ಸರಕಾರಿ ಶಾಲೆಗಳಿಗೆ ಸರಕಾರ ಸಾಕಷ್ಟು ಅನುದಾನ ನೀಡಿ, ಉತ್ತಮ ಸೌಲಭ್ಯಗಳನು ನೀಡುತ್ತಿದೆ. ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಈಗ ಉದ್ಘಾಟನೆಯಾಗಿರುವ ಶಾಲೆಯ ಭೋಜನಾಲಯದ ಕೊಠಡಿಯನ್ನು ವಿದ್ಯಾರ್ಥಿಗಳೇ ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಲ್ಲಿಇಲ್ಲಿ ಆಹಾರಪಧಾರ್ಥಗಳನ್ನು ಚೆಲ್ಲಾಡಬಾರದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ಸಮೀಪದ ಚಿಕ್ಕಮುಚ್ಚಳಗುಡ್ಡದ ಆದರ್ಶ ವಿದ್ಯಾಲಯದಲ್ಲಿ ಭೋಜನಾಲಯದ ಕೊಠಡಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಪ್ಪದೇ ಶಾಲೆಗೆ ಬರಬೇಕು. ಸತತ ಅಭ್ಯಾಸದಿಂದ ಮಾತ್ರ ಹೆಚ್ಚು ಅಂಕಪಡೆಯಲು ಸಾಧ್ಯವಾಗುತ್ತದೆ. ಯಾವ ವಿದ್ಯಾರ್ಥಿಯೂ ದಡ್ಡರಿರುವುದಿಲ್ಲ. ವಿದ್ಯಾರ್ಥಿಗಳು ಯಾವುದೇ ಸಂಕೋಚಪಡೆದೇ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಹೆಚ್ಚುವರಿ ಶಿಕ್ಷಕ ಸಂಗಮೇಶ ಗಣಾಚಾರಿ ಅವರನ್ನು ಬೇರೆಡೆ ವರ್ಗ ಮಾಡದೇ ಶಾಲೆಯಲ್ಲಿಯೇ ಉಳಿಸಿಕೊಳ್ಳುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಈ ವಿಷಯ ರಾಜ್ಯಮಟ್ಟದಲ್ಲಿದ್ದು, ನನ್ನ ಕೈಲಾದಮಟ್ಟಿಗೆ ಏನಾದರೂ ಮಾಡಿ ಶಿಕ್ಷಕರನ್ನು ಇದೇ ಶಾಲೆಯಲ್ಲಿ ಉಳಿಸಿಕೊಳ್ಳಲು ಪ್ರಯತ್ನ ಪಡುತ್ತೇನೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ದ್ರಾಕ್ಷಾಯಣಿ ಕಲ್ಲಾಪೂರ, ಜಿಲ್ಲಾ ಉಪನಮನಸ್ವಯಾಧಿಕಾರಿ ಜಾಸ್ಮಿನ್ ಕಿಲ್ಲೇದಾರ, ಎಸ್‍ಡಿಎಂಸಿ ಅಧ್ಯಕ್ಷ ಶಿವಯ್ಯ ಹಿರೇಮಠ, ಬೋರಮ್ಮ ಕಟ್ಟಿ, ಅಕ್ಷರದಾಸೋಹ ಅಧಿಕಾರಿ ಎಂ.ಬಿ.ದೊಡ್ಡಪ್ಪನವರ, ಶಿವಾನಂದ ಮುತ್ತಲಗೇರಿ, ನಾಗಪ್ಪ ಹುಲ್ಲಿಕೇರಿ, ಗಿರಿಯವ್ವ ನಕ್ಕರಗುಂದಿ, ಪ್ರಾಚಾರ್ಯ ಆರ್.ಎಸ್. ಭಜಂತ್ರಿ, ಹಿರಿಯ ಪತ್ರಕರ್ತರಾದ ಎಸ್.ಎಂ. ಹಿರೇಮಠ, ಮಂಜು ಪತ್ತಾರ, ಬಸವರಾಜ ಓಗೆಣ್ಣವರ, ಪ್ರಮೋದ ಗೌಡರ, ಪಿಡಿಓ ರಮೇಶ ಚಿನ್ನಾನಿ, ಬಸವರಾಜ ಅಂಗಡಿ, ಬಸವರಾಜ ಯತ್ತಿನಮನಿ, ಬೋರಮ್ಮ ಕಟ್ಟಿ, ರೇಖಾ ಶಿವಪ್ಪಯ್ಯನಮಠ, ಅಮೀನಸಾಬ ನದಾಫ್, ಪಿ.ಎಂ. ಗಾಣಿಗೇರ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.