ಉ.ಪ್ರದೇಶ: ಮೊದಲ ಹಂತದ ಪಾಲಿಕೆ ಮತದಾನ ಬಿರುಸು

ಲಕ್ನೋ,ಮೇ.೪- ಉತ್ತರ ಪ್ರದೇಶದ ನಗರ ಪಾಲಿಕೆ ಚುನಾವಣೆಗೆ ರಾಜ್ಯದ ೩೭ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಮತದಾನ ಬಿಗಿ ಭದ್ರೆತೆಯಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನಿಂದ ಸಾಗಿದೆ
ಮೊದಲ ಹಂತದಲ್ಲಿ, ೯ ವಿಭಾಗಗಳ ೧೦ ಸ್ಥಳೀಯ ಸಂಸ್ಥೆಗಳಿಗೆ ಮತದಾನ ಬೆಳಿಗ್ಗೆಯಿಂದಲೇ ಬಿರುಸಿನಿಂದ ಸಾಗಿದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ ಚಲಾಯಿಸಿ, ಜನರು ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶದ ನಗರ ಪಾಲಿಕೆ ಚುನಾವಣೆಯಲ್ಲಿ, ೨ ಕೋಟಿ ೪೦ ಲಕ್ಷ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸುವ ಅಧಿಕಾರ ಹೊಂದಿದ್ದಾರೆ. ೧೦ ಮೇಯರ್ ಗಳು, ೮೨೦ ಪಾಲಿಕೆ ಸದಸ್ಯರು ೧೦೩ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷರು, ೨೭೪೦ ಸದಸ್ಯ ಮುನ್ಸಿಪಲ್ ಕೌನ್ಸಿಲ್‌ಗಳು, ೩೬೪೫ ಪುರಸಭೆಯ ಸದಸ್ಯರು ಸೇರಿದಂತೆ ೨೭೫ ಅಧ್ಯಕ್ಷರನ್ನು ಆಯ್ಕೆಗೆ ಮತದಾನ ನಡೆದಿದೆ.
೧೦ ನಗರಸಭೆಗಳಲ್ಲಿ ೮೩೦ ವಾರ್ಡ್‌ಗಳಲ್ಲಿ ಮತದಾನ ನಡೆದಿದೆ. ಇದಕ್ಕಾಗಿ ೯೬೯೯ ಮತಗಟ್ಟೆ ತೆರೆಯಲಾಗಿದೆ. ನಗರಸಭೆಗಳಲ್ಲಿ ೨೬೫೮ ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಶಾಮ್ಲಿ, ಮುಜಾಫರ್‌ನಗರ, ಸಹರಾನ್‌ಪುರ್, ಬಿಜ್ನೋರ್, ಅಮ್ರೋಹಾ, ಮೊರಾದಾಬಾದ್, ರಾಂಪುರ, ಸಂಭಾಲ್, ಆಗ್ರಾ, ಫಿರೋಜಾಬಾದ್, ಮಥುರಾ, ಮೈನ್‌ಪುರಿ, ಝಾನ್ಸಿ, ಜಲೌನ್, ಲಲಿತ್‌ಪುರ, ಕೌಶಂಬಿ, ಪ್ರಯಾಗರಾಜ್, ಫತೇಪುರ್, ಅನ್ ಪ್ರತಾಪ್‌ಗರ್ ೩೭ ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ.
ಹರ್ದೋಯಿ, ಲಕ್ನೋ, ರಾಯ್ ಬರೇಲಿ, ಸೀತಾಪುರ್, ಲಖಿಂಪುರ ಖೇರಿ, ಗೊಂಡಾ, ಬಹ್ರೈಚ್, ಬಲರಾಂಪುರ, ಶ್ರಾವಸ್ತಿ, ಗೋರಖ್‌ಪುರ್, ಡಿಯೋರಿಯಾ, ಮಹಾರಾಜ್‌ಗಂಜ್, ಕುಶಿನಗರ, ಗಾಜಿಪುರ್, ವಾರಣಾಸಿ, ಚಂದೌಲಿ ಮತ್ತು ಉತ್ತರ ಪ್ರದೇಶದ ೯ ವಿಭಾಗಗಳ ಜಹಾನ್‌ಪುರ್, ಜಹಾನ್‌ಸಿ, ಅಗ್ರಾ, ಪ್ರಯಾಗ್‌ರಾಜ್, ಲಕ್ನೋ, ದೇವಿಪಟನ್, ಗೋರಖ್‌ಪುರ ಮತ್ತು ವಾರಣಾಸಿ ಮತ್ತಿತರ ನಗರಸಭೆಗೂ ಚುನಾವಣೆ ನಡೆದಿದೆ.
ನಗರಸಭೆಯಲ್ಲಿ ೬೩೦೩೫೪೨ ಪುರುಷ ಹಾಗೂ ೫೩೬೨೧೫೧ ಮಹಿಳಾ ಮತದಾರರಿದ್ದಾರೆ. ಮೇ ೧೩ ರಂದು ಮತ ಎಣಿಕೆ ನಡೆಯಲಿದೆ.