ಉ.ಕ. ಜಿಲ್ಲಾ ರೇಲ್ವೆ ಸೇವಾ ಸಮಿತಿ ವಾರ್ಷಿಕ ಸಭೆ

ಕಾರವಾರ,ಡಿ2 : ಕಾರವಾರದ ಹೊಟೆಲ್‍ಇಡೆನ್‍ದ ಸಭಾಭವನದಲ್ಲಿ ನಡೆದ ಉತ್ತರಕನ್ನಡಜಿಲ್ಲಾರೇಲ್ವೆ ಸೇವಾ ಸಮಿತಿಯ ವಾರ್ಷಿಕ ಸಭೆಗೆ, ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಶ್ರೀ ಸತೀಶ ಸೈಲ್‍ರವರು ಉಪಸ್ತಿತರಿದ್ದು, ಸೇವಾ ಸಮಿತಿಯು ಒಂದು ವರ್ಷದಲ್ಲಿ; ನಡೆದು ಬಂದಅಭಿವೃದ್ದಿ ಕಾರ್ಯಗಳನ್ನು ಆಲಿಸಿ ತಮ್ಮ ಬೆಂಬಲ ಸದಾ ನಿಮಗಿದೆ. ಗೌರವಾಧ್ಯಕ್ಷರಾದ ಮಂಗಲದಾಸಕಾಮತ, ಅಧ್ಯಕ್ಷರಾದ ಜಾರ್ಜ ಫರ್ನಾಂಡಿಸ್, ಉಪಾಧ್ಯಕ್ಷ ವೆಂಟು ಮಾಸ್ತರ್ ಶೀಳ್ಯ, ಕಾರ್ಯಾಧ್ಯಕ್ಷ ರಾಜೀವ ಗಾಂವಕರ, ಕೋಶಾಧ್ಯಕ್ಷ ಮಹೇಶ ಗೋಳಿಕಟ್ಟೆ ಹಾಗೂ ನಿಮ್ಮತಂಡದ ಶಿಸ್ತುಬದ್ಧ ಪ್ರಾಮಾಣಿಕ ಪ್ರಯತ್ನಕ್ಕೆ ನಾನು ಎಂದಿಗೂ ಬೆಂಗಾವಲಾಗಿರುತ್ತೇನೆಎಂದರು.
ಸೇವಾ ಸಮಿತಿಯಅಧ್ಯಕ್ಷಜಾರ್ಜ ಫರ್ನಾಂಡಿಸ್‍ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಮಿತಿಯ ಒಂದು ವರ್ಷದ ಸಾಧನೆಯ ಮೆಟ್ಟಿಲುಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಸದಸ್ಯರನ್ನು ಸ್ವಾಗತಿಸಿದರು. ತಟರಕ್ಷಕ ಪಡೆಯ ನಿವೃತ್ತಆಯ್. ಜಿ. ಯವರು ಸಮಿತಿಯ ಕಾರ್ಯಕಲಾಪಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಿತಿಯ ಅಧ್ಯಕ್ಷರಾದ ಜಾರ್ಜ ಫರ್ನಾಂಡಿಸ್‍ರವರು ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಒಂದು ವರ್ಷದ ಕಾರ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ತಮ್ಮ ಮುಖ್ಯಗುರಿ. ಹುಬ್ಬಳ್ಳಿ-ಅಂಕೋಲಾ ರೇಲ್ವೆಯೋಜನೆ ಅನುಷ್ಠಾನ ಯಶಸ್ವಿಯಾಗುವಲ್ಲಿ, ಕಾನೂನು ಹೋರಾಟದಲ್ಲಿಅಕ್ಷಯ ಪಾತ್ರೆಯಾಗಿ ಸೇವೆ ಒದಗಿಸಿದ, ನ್ಯಾಯವಾದಿ ರವೀಂದ್ರಜೇ. ಕೊಲ್ಲೆ ಹಾಗೂ ಅಕ್ಷಯಕೊಲ್ಲೆಯವರ ಕಾನೂನಿನ ಕೊಡುಗೆಯನ್ನು ಅವಿಸ್ಮರಣೀಯ ಎಂದರು. ಈ ದಿಶೆಯಲ್ಲಿ ದಿನ ನಿತ್ಯವು ಶ್ರಮಿಸಿದ ರಾಜೀವಗಾಂವಕರರ ಕಾರ್ಯಕ್ಷಮತೆ ಅಸಾಧಾರಣವಾದುದು ಎಂದು ಹೇಳಿದರು.