ಉಸ್ತುವಾರಿ ಸಚಿವ ಕಾಟಾಚಾರಕ್ಕೆ ಜಿಲ್ಲೆಗೆ ಬೇಟಿ

ರಾಯಚೂರು, ಮೇ.೧- ಸುಮಾರು ೩ ತಿಂಗಳಿಂದ ರಾಜ್ಯದ ಉಪ ಮುಖ್ಯಮಂತ್ರಿ ,ಸಾರಿಗೆ ಸಚಿವ, ರಾಯಚೂರ ಜಿಲ್ಲಾ ಉಸ್ತುವಾರಿ ನಿನ್ನೆ ಮುಖ್ಯಮಂತ್ರಿಗಳ ಆದೇಶ ಮೇರೆಗೆ ರಾಯಚೂರಿಗೆ ಬಂದಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮುಖಾಂತರ ಅಧಿಕಾರಿಗಳ ಸಭೆ ತೆಗೆದುಕೊಂಡಿದ್ದು. ಕಾಟಾಚಾರಕ್ಕೆ ಮಾತ್ರ. ಕೋವಿಡನ ಸರಕಾರಿ ಆಸ್ಪತ್ರೆ ಆಗಲಿ, ಖಾಸಗಿ ಕೋವಿಡನ ೨೪ ಆಸ್ಪತ್ರೆಯ ಕುರಿತು ಭೇಟಿ ನೀಡಿಲ್ಲ. ಇವರಿಗೆ ಸಾರ್ವಜನಿಕರ ಕಾಳಜಿ ಇಲ್ಲ. ಏಕೆಂದರೆ ಸೋತ ಅದೃಷ್ಟಕ್ಕೆ ಉಪ ಮುಖ್ಯಮಂತ್ರಿ ಗಳಾಗಿದ್ದಾರೆ. ಇವರಿಗೆ ಮುಂದೆ ಚುಣಾವಣೆಗೆ ರಾಯಚೂರಿನ ವೋಟ್ ಬ್ಯಾಂಕ್ ಬೇಕಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ ಚುಚ್ಚು ಮದ್ದು, ವೆಂಟಿಲೆಟರ್, ಬೆಡ್ ಗಳ ಬಗ್ಗೆ ಏನೆನು ವಿಚಾರಿಸಿಲ್ಲ. ವಿಫಲವಾದ ಉಸ್ತುವಾರಿ ಸಚಿವ ರಾಯಚೂರಗೆ ಬೇಡವೇ ಬೇಡ. ಉಸ್ತುವಾರಿಗಳು ಬಂದ ನಂತರ ವಾಸ್ತವ ಹೂಡಿ ತಾಲೂಕಗಳಿಗೆ ಭೇಟಿ ನೀಡುವ ಸೌಜನ್ಯ ಮರೆತ ಲಕ್ಷ್ಮಣ ಸವದಿಗೆ ಕರ್ನಾಟಕ ರಕ್ಷಣಾ ವೇದಿಕೆ (ಶೀವರಾಮೆಗೌಡ ಬಣ) ಜಿಲ್ಲಾ ಘಟಕ ಉಗ್ರವಾಗಿ ಖಂಡಿಸಿದರು.ಉಸ್ತುವಾರಿ ಸಚಿವ ಕಾಟಾಚಾರಕ್ಕೆ ಜಿಲ್ಲೆಗೆ ಬೇಟಿ