ಉಸ್ತುವಾರಿ ಸಚಿವರ ಬದಲಾವಣೆಗೆ ಆಗ್ರಹ

ಕಲಬುರಗಿ ಡಿ 26: ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸುವಂತೆ ಕನ್ನಡಭೂಮಿ ಜಾಗೃತಿ ಸಮಿತಿ ಆಗ್ರಹಿಸಿದೆ.
ಇಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪುರ ನೇತೃತ್ವದಲ್ಲಿ ಜಿಲ್ಲಾಡಳಿತದ ಮೂಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲಾ ಉಸ್ತುವಾರಿ ಸಚಿವರು ಕಲಬುರಗಿಗೆ ಬರದೆ ತಿಂಗಳುಗಳೇ ಕಳೆದಿವೆ. ಕಲಬುರಗಿ ಜಿಲ್ಲೆಯು ಕೊರೋನಾ,ಅತಿವೃಷ್ಠಿ, ಮಹಾಪೂರ ಸೇರಿದಂತೆ ಅನೇಕ ಸಂಕಷ್ಟಗಳಿಗೆ ತುತ್ತಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿ ಅತ್ಯಗತ್ಯವಾಗಿದೆ.
ಆದ್ದರಿಂದ ಕಲಬುರಗಿ ಜಿಲ್ಲೆಯ ಶಾಸಕರಿಗೆ ಸಚಿವಸ್ಥಾನ ನೀಡಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹದ ಮನವಿ ಸಲ್ಲಿಸಲಾಯಿತು .ಈ ಸಂದರ್ಭದಲ್ಲಿ ಪ್ರಶಾಂತ ತಂಬೂರಿ ,ಗುರುಲಿಂಗಪ್ಪ ಟೆಂಗಳಿ,ಶರಣಯ್ಯ ಇಕ್ಕಳಕಿ ಮಠ,ಶ್ರೀಕಾಂತ ನಾಗಶೆಟ್ಟಿ,ಸಾಜೀದ ಅಲಿ ರಂಜೋಳ್ವಿ,ಅಶೋಕ ದಂಗಾಪುರ ಸೇರಿದಂತೆ ಹಲವರಿದ್ದರು.