ಉಸ್ತುವಾರಿ ಸಚಿವರು ಸ್ಪಂದಿಸುತ್ತಿದ್ದರೂ ಅಧಿಕಾರ ಯಾರ ಬಳಿ ಇದೆ

ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಶಾಸಕ ತನ್ವೀರ್ ಸೇಠ್
ಮೈಸೂರು. ಮೇ.21: ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲ ಕ್ಷೇತ್ರಗಳಿಗೆ ಸ್ಪಂದಿಸುತ್ತಿದ್ದರೂ ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಅಧಿಕಾರ ಯಾರ ಬಳಿ ಇದೆ ಎಂಬುದೇ ತಿಳಿಯುತ್ತಿಲ್ಲ ಎಂದು ಶಾಸಕ ತನ್ವೀರ್ ಸೇಠ್ ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ರಾಜೀವ್ ಗಾಂಧಿ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಭಯೋತ್ಪಾದನಾ ವಿರೋಧಿ ದಿನ ಆಚರಣೆಯಲ್ಲಿ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ದೇಶ ಕಂಡ ಸಜ್ಜನಿತ, ಭಾರತವನ್ನು ದೂರದೃಷ್ಟಿಯಿಂದ ಮುನ್ನಡೆಸುವಂತಹ ಮಹಾನ್ ನಾಯಕನ ಪುಣ್ಯಸ್ಮರಣೆ ಕಾರ್ಯಕ್ರಮ. ಕೊರೋನಾ ಇಂದು ಸಾಕಷ್ಟು ಸಾವು ನೋವು ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಮಾತನಾಡುವುದು ಹೇಗೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಆದರೆ ಸಂಪ್ರದಾಯದಂತೆ ಮಾತನಾಡುವ ಅವಕಾಶ ಸಿಕ್ಕಾಗ ಅನೇಕ ವಿಷಯಗಳನ್ನು ಹಂಚಿಕೊಳ್ಳುವ ವೇದಿಕೆ ಇದು. ಬಹುಶಃ ಈಗಾಗಲೇ ಸರ್ಕಾರದ ವೈಫಲ್ಯತೆಗಳನ್ನು ಸಾರಿ ಸಾರಿ ಹೇಳಿದರೂ ಕೂಡ ಅದಕ್ಕೆ ನಮಗೆ ಕೆಲವು ಸ್ಪಂದನೆ ಸಿಗುತ್ತಿದೆ. ವ್ಯಾಕ್ಸಿನೇಶನ್ ಪಡೆದಿರುವ ಅನೇಕ ರಾಷ್ಟ್ರಗಳು ಕೊರೋನಾ ಹತೋಟಿಗೆ ತರುವ ಕೆಲಸ ಮಾಡಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಹೈಕೋರ್ಟ್ ಗೆ ಮೊರೆ ಹೋಗಿ ಪಿಐಎಲ್ ಹಾಕಿದ ಸಂದರ್ಭದಲ್ಲಿ ಬಹುಶಃ ಪ್ರಶ್ನೆ ಮಾಡುವಂತದ್ದಲ್ಲ, ಆದರೆ ಆತಂಕವನ್ನು ವ್ಯಕ್ತಪಡಿಸಬೇಕಾಗಲಿದೆ. ಎಷ್ಟು ಬೆಡ್ ಗಳನ್ನು, ಎಷ್ಟು ವ್ಯವಸ್ಥೆಗಳನ್ನು ನೀವು ಮಾಡಿದ್ದೀರಾ ಹೇಳಿ ಅಂತ ನ್ಯಾಯಾಲಯ ಅರ್ಜಿದಾರರಿಗೆ ಪ್ರಶ್ನೆ ಮಾಡಿದೆ ಅಂತ ಹೇಳಿದರೆ ಯಾವ ಒಂದು ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂಬುದು ಅರ್ಥವಾಗಲಿದೆ ಎಂದರು.
ಸರ್ಕಾರ ಆರೋಗ್ಯ ಕ್ಷೇತ್ರದ ಬೆಳವಣಿಗೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಪ್ರತಿಯೊಬ್ಬನಿಗೂ ರಕ್ಷಣೆ ಕೊಡುವ ಕೆಲಸ ಮಾಡಬೇಕಾಗಿರುವುದು ನಿಜ. ಯಾರೂ ನಿರೀಕ್ಷೆ ಮಾಡದಂತಹ ಪರಿಸ್ಥಿತಿ, ಮೈಸೂರು ನಗರಕ್ಕೆ ಕೈಗಾರಿಕಾ ವಲಯ ಮತ್ತು ವೈದ್ಯಕೀಯ ಸೌಲಭ್ಯಗಳಿಗೆ 7 ಮೆಟ್ರಿಕ್ ಟನ್ ಆಕ್ಸಿಜನ್ ಬಳಕೆಯಾಗುತ್ತಿತ್ತು. 47ಮೆಟ್ರಿಕ್ ಟನ್ ವೈದ್ಯಕೀಯ ಉಪಯೋಗಕ್ಕೆ ಸಿಕ್ಕಿದರೂ ಸಾಲುತ್ತಿಲ್ಲ ಎನ್ನುವಾಗ ಎಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಬಳಕೆಯಾಗುತ್ತಿದೆ. ಜನತೆಗೆ ಸಾರಿ ಸಾರಿ ಹೇಳುತ್ತಿದ್ದೇವೆ. ವ್ಯವಸ್ಥೆ ಜೊತೆಗೆ ಸ್ಪಂದಿಸಿ, ಅವಶ್ಯಕತೆ ಇದ್ದರೆ ಮಾತ್ರ ಹೊರಬನ್ನಿ ಅಂತ. ಆದರೂ ಕೂಡ ಸಂಕಷ್ಟದಲ್ಲಿರುವಂತಹವರಿಗೆ ರಕ್ಷಣೆ ನೀಡುವಂತಹ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ವತಿಯಿಂದ ಅನೇಕ ಸಂಘ ಸಂಸ್ಥೆಗಳು ಹಸಿವಿನಿಂದ ನರಳುತ್ತಿರುವ ಜನರ ರಕ್ಷಣೆಗೆ ಬಂದಿದೆ. ಅದರಲ್ಲೂ ಯುವ ಸ್ನೇಹಿತರು ಎನ್ ಎಸ್ ಯ ಐ, ಯುವಕಾಂಗ್ರೆಸ್ ಅನೇಕ ಕ್ಷೇತ್ರಗಳಲ್ಲಿ ಅಗತ್ಯ ವಸ್ತುಗಳನ್ನು ವಿತರಣೆ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಗೆದ್ದಂತಹವರು ಮತ್ತು ಸೋತಂತವರು ತಮ್ಮ ಸ್ವಂತ ಖರ್ಚಿನಿಂದ ಆ?ಯಂಬುಲೆನ್ಸ್ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ವೈದ್ಯರು, ಆಕ್ಸಿಜನ್ ತರುವ ಕೆಲಸ ಮಾಡಲು ಸರ್ಕಾರ ಸ್ಪಂದಿಸಬೇಕು. ಜಿಲ್ಲಾ ಆರೋಗ್ಯ ಅಧಿಕಾರಿಗಳು ಒಂದು ಆದೇಶ ಹೊರಡಿಸಿದ್ದಾರೆ. ಅನುಮತಿ ಪಡೆದ 16ಕೋವಿಡ್ ಕೇಂದ್ರಗಳನ್ನು ಅವರ ಅನುಮತಿ ರದ್ದುಗೊಳಿಸುವ ಆದೇಶ ಮಾಡಿದ್ದಾರೆ. ಉಲ್ಲೇಖದಲ್ಲಿ ಕೆ.ಆರ್.ಕ್ಷೇತ್ರದ ಶಾಸಕ ಶಿಫಾರಸು ಮೇರೆಗೆ ಅಂತ ಬರೆಯುತ್ತಾರೆ. ಯಾರಿಗೆ ಯಾರು ಅಧಿಕಾರ ಕೊಟ್ಟಿದ್ದಾರೆ. ಅವರವರ ಕ್ಷೇತ್ರದಲ್ಲಿ ಅವರೇನಾದರೂ ಮಾಡಿಕೊಳ್ಳಲಿ, ಮತ್ತೊಬ್ಬರ ಕ್ಷೇತ್ರದಲ್ಲಿ ಕೈಹಾಕುವ ಅಧಿಕಾರ ಯಾರು ಕೊಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಶಕ್ತಿ ಮೀರಿ ಜನರಿಗೆ ಸ್ಪಂದಿಸುವ ಕೆಲಸ ಮಾಡದಿದ್ದರೆ ಉತ್ತೇಜನ. ಪೆÇ್ರೀತ್ಸಾಹ ನೀಡುವುದು ಬಿಟ್ಟು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲ ಕ್ಷೇತ್ರಗಳಿಗೂ ಸ್ಪಂದಿಸುತ್ತಿದ್ದಾರೆ ಆದರೆ ಅಧಿಕಾರ ಯಾರ ಕೈನಲ್ಲಿ ಇದೆ ಎನ್ನುವುದು ಯಾರಿಗೂ ಗೊತ್ತಾಗುತ್ತಿಲ್ಲ, ಓರ್ವ ಶಾಸಕರು ನಡೆಸುತ್ತಿದ್ದಾರೆ. ಅಥವಾ ಯಾವುದಾದರೂ ಅಧಿಕಾರಿಗಳ ಕೈಗೆ ಕೊಟ್ಟುಬಿಟ್ಟಿದ್ದಾರಾ? ಅಥವಾ ಸರ್ಕಾರ ನೇರವಾಗಿ ಇದನ್ನು ನಡೆಸಲು ಮಾರ್ಗಸೂಚಿಗಳನ್ನೇನಾದರೂ ಕೊಟ್ಟಿದೆಯಾ? ಎನ್ನುವುದನ್ನು ತಿಳಿಸಬೇಕು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ಹೇಳಿಕೆಯೇ ಒಂದು ಇರುತ್ತದೆ. ಉಪಮುಖ್ಯಮಂತ್ರಿಗಳ ಹೇಳಿಕೆಯೇ ಒಂದು ಇರುತ್ತದೆ. ವ್ಯಾಕ್ಸಿನ್ ವಿಚಾರದಲ್ಲಿ ಎಷ್ಟು ಗೊಂದಲಗಳಿರುತ್ತದೆ. ಇದನ್ನು ನಿರ್ವಹಣೆ ಮಾಡುವಂತದ್ದು ಕೇಳುತ್ತಲೇ ಇದ್ದೇವೆ. ನಮ್ಮ ಸಲಹೆಗಳನ್ನು ಕೊಟ್ಟಿದ್ದೇವೆ. ಬಹುಶಃ ಇದೆಲ್ಲವನ್ನು ನೋಡಿ ಕೆಲಸ ಮಾಡುವ ಸಂದರ್ಭ ಬಂದಿದೆ. ಕಾಂಗ್ರೆಸ್ ಬಂಧುಗಳು ಸ್ಲಂ ನಲ್ಲಿರುವ ಜನರ ರಕ್ಷಣೆಗೆ ನಿಂತಿದ್ದೀರಿ, ಇನ್ನಷ್ಟು ಕೆಲಸದಲ್ಲಿ ತೊಡಗಿಸಿಕೊಳ್ಳಿ, ರಾಜೀವ್ ಗಾಂಧಿಯವರಂತಹ ನಾಯಕರನ್ನು ಮತ್ತೆ ಪಡೆಯುತ್ತೇವೆ ಎನ್ನುವುದು ಬರಿಯ ಕನಸಷ್ಟೇ ಎಂದರು.
ಮಾಜಿ ಶಾಸಕರುಗಳಾದ ವಾಸು, ಎಂ.ಕೆ ಸೋಮಶೇಖರ್, ಜಿಲ್ಲಾ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಮೂರ್ತಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಇತರರು ಭಾಗಿಯಾಗಿದ್ದರು.