ಉಸ್ತುವಾರಿ ಕೊಟ್ಟರೆ ನಿಭಾಯಿಸುವೆ: ಎಸ್.ಎ.ರಾಮದಾಸ್

ಮೈಸೂರು: ಜ.11: ಸಚಿವ ಸ್ಥಾನ ಕೊಟ್ರೆ ಸಂತೋಷ. ಇಲ್ಲದಿದ್ದರೂ ನನ್ನ ಕೆಲಸ ನಾನು ಮಾಡುವೆ ಎಂದು ಶಾಸಕ ಎಸ್.ಎ.ರಾಮದಾಸ್ ತಮ್ಮ ಸಚಿವ ಸ್ಥಾನ ಆಕಾಂಕ್ಷೆಯನ್ನು ವ್ಯಕ್ತಪಡಿಸಿದರು.
ಸುತ್ತೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಆಕಾಂಕ್ಷೆ ಇದೆ. ಮನೆಯ ಯಜಮಾನರಾಗಿ ಯಡಿಯೂರಪ್ಪ ಅವರು ಉಸ್ತುವಾರಿ ಕೊಟ್ಟರೆ ನಿಭಾಯಿಸುವೆ. ಇಲ್ಲದಿದ್ದರೂ ಪಕ್ಷಕ್ಕೆ ನಿಷ್ಠೆಯಾಗಿರುವೆ ಎಂದು ತಿಳಿಸಿದರು.
ಮುಂದಿನ ಎರಡೂವರೆ ವರ್ಷವೂ ಯಡಿಯೂರಪ್ಪ ಅವರೇ ನಮ್ಮ ಕ್ಯಾಪ್ಟನ್. ಅವರ ತಂಡದಲ್ಲಿ ಯಾರಿರಬೇಕು ಎಂಬುದನ್ನ ಅವರೇ ನಿರ್ಧರಿಸುತ್ತಾರೆ. ಅವಕಾಶ ಕೊಟ್ಟರೆ ಸ್ವಚ್ಛವಾಗಿ ಆಡಳಿತ ನಡೆಸುತ್ತೇನೆ. ಕೊಡದೆ ಇದ್ದರು ಏನು ಬೇಸರವಿಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು. ಯಡಿಯೂರಪ್ಪ ಅವರೇ ನಮ್ಮ ಕ್ಯಾಪ್ಟನ್. ನಾವು ಯಾವುದೇ ನಿರೀಕ್ಷೆ ಆಸೆಗಳನ್ನು ಇಟ್ಟುಕೊಂಡಿಲ್ಲ.