ಉಸ್ತಾವಾರಿ ಸಚಿವರ ಹಠವೋ ರಾಯಚೂರು ಬಚಾವೋ

ರಾಯಚೂರು.ಮೇ.೦೧- ಜಿಲ್ಲೆಯಲ್ಲಿ ಕರೋನ ಹೆಚ್ಚಳವಾಗುತ್ತಿದೆ ಜನ ಸಾಮಾನ್ಯರಿಗೆ ಸರಿಯಾಗಿ ಚಿಕ್ಸಿತೆ ಸಿಗುತ್ತಿಲ್ಲ ಔಷಧಿದೋರೆಯುತ್ತಿಲ್ಲ ಈ ಔಷಧಿಗಳನ್ನು ಕಾಣದ ಕೈಗಳಿಂದ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ತಾವು ನೇರವಾಗಿ ರಿಮ್ಸ್ ಭೇಟಿ ನೀಡದೆ ಕೇವಲ ಕಾಟಾಚರಕ್ಕೆ ವಿಡಿಯೋ ಮೂಲಕ ಸಭೆ ಮಾಡಲು ಆಗಮಿಸಿದ್ದು ನೋಡಿದರೆ ಈ ಜಿಲ್ಲೆಯ ಜನತೆ ಬಗ್ಗೆ ಯಾವುದೇ ಕಾಳಜಿ ತೋರಿಸುತ್ತಿಲ್ಲ ಇವರನ್ನು ತಕ್ಷಣವೇ ಉಪಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷಣ ಸವದಿಯನ್ನು ಬದಲಾವಣೆಯ ಮಾಡಬೇಕು ಎಂದು ಜೆಡಿಎಸ್ ಜಿಲ್ಲಾಕಾರ್ಯಧ್ಯಕ್ಷ ಎನ್ ಶಿವಶಂಕರ ವಕೀಲ್ ಆಗ್ರಹಸಿದ್ದಾರೆ.
ಪ್ರತಿ ಆರು ತಿಂಗಳಗೊಮ್ಮೆ ಆಗಮಿಸಿವ ಇವರು ಜಿಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಆದರೆ ತಮ್ಮ ಬೆಳಗಾವಿ ಜಿಲ್ಲೆಯ ಖುದ್ದು ಅಧಿಕಾರಗಳ ಸಭೆ ನಡೆಸಿ ವಿವರ ಪಡೆಯುವ ಇವರು ರಾಯಚೂರುನಲ್ಲಿ ಮಾತ್ರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡುತ್ತಾರೆ ವಿರೋಧ ಪಕ್ಷಗಳ ಮುಖಂಡರಿಗೆ ಭೇಟಿಯಾಗವುದಿಲ್ಲ ಸಂಘ ಸಂಸ್ಥೆಗಳಿಗ ಸಮಸ್ಯೆಯ ಆಲಿಸುವ ಸೌಜನ್ಯ ವಿಲ್ಲ ತಮ್ಮ ಉಸ್ತುವಾರಿ ಸಚಿವರ ಸೌಲಭ್ಯ ಪಡೆಯಲು ಆಗಮಿಸುತ್ತಾರೆ.
ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಯ ಶಾಸಕರಾದ ವೆಂಕಟರಾವ್ ನಾಡಗೌಡ ಅವರನ್ನು ಮಾಡಲಾಗಿತ್ತು.
ನಮ್ಮ ಜಿಲ್ಲೆಯವರು ಸಚಿವರಾದರೆ ಸ್ಥಳೀಯ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಬಿಜೆಪಿಯ ಸ್ಥಳೀಯ ಶಾಸಕರಿಗೆ ಸಚಿವರಾಗಿ ಮಾಡಿ ಜಿಲ್ಲಾ ಉಸ್ತಾವರಿ ನೀಡಲಿ ಜಿಲ್ಲೆಯ ಮೂರು ವರ್ಷಗಳಿಂದ ಅನೇಕ ಸಮಸ್ಯೆಯಗಳು ಹಾಗೆ ಇವೆ ಒಂದು ವೇಳೆ ಸರ್ಕಾರ ಇವರನ್ನು ಬದಲಾವಣೆಯ ಮಾಡದಿದ್ದರೆ ಜಿಲ್ಲಾ ಉಸ್ತಾವರಿ ಹಠವೋ ರಾಯಚೂರ ಬಚಾವೋ ಎಂಬ ಹೋರಾಟ ನಮ್ಮ ಪಕ್ಷದಿಂದ ಎಲ್ಲ ಸಂಘ ಸಂಸ್ಥೆಗಳಿಂದ ಹಮ್ಮಿಕೊಳ್ಳಲಾಗವು ಎಂದು ಎಚ್ಚರಿಸಿದರು.