ಉಸಿರು ಹೋದರು ಹೆಸರು ಉಳಿಯುವಂತೆ ಜೀವಿಸಬೇಕು

ಬಸವನಬಾಗೇವಾಡಿ:ಮಾ.28: ಜೀವನಲ್ಲಿ ಪ್ರತಯೊಬ್ಬರು ನಗು ನಗುತ್ತ ಎಲ್ಲರೊಂದಿಗೆ ಸಹೋದರತ್ವ ಬಾವನೆಯಿಂದ ಜೀವಸಬೇಕು ಉಸಿರು ಹೋದರು ಹೆಸರು ಉಳಿಯುವಂತೆ ಜೀವಿಸಬೇಕು ಎಂದು ಯರನಾಳದ ಶ್ರೀ ಸಂಗನಬಸವ ಸ್ವಾಮೀಜಿಗಳು ಹೇಳಿದರು.
ತಾಲೂಕಿನ ಯರನಾಳ ಗ್ರಾಮದಲ್ಲಿ ಸೋಮವಾರ ಕರ್ತೃ ಜಗದ್ಗುರು ಶ್ರೀ ಪಂಪಾಪತಿ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು ವಿದ್ಯಾಲಯವು ದೇವಾಲಯ ವಿಧ್ಯರ್ಥಿಗಳೆ ದೇವರು ಎಂಭ ನಾನ್ನುಡಿಯಂತೆ ಮಕ್ಕಳಲ್ಲಿ ದೇವರ ಕಂಡವರು ಬಂತನಾಳ ಶ್ರೀಗಳು, ಶ್ರೀಗಳ ಆಶಯದಂತೆ ವಿಜಯಪುರ ಜಿಲ್ಲೆಯಲ್ಲಿ ಮಕ್ಕಳಿಗೆ ಅನುಕೂಲವಾಗು ದೃಷ್ಠಿಯಿಂದ ವಿದ್ಯಾ ಸಂಸ್ಥೆಗಳನ್ನು ಆರಂಭಿಸಿ ಸಾಕಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ನಮ್ಮ ಶ್ರೀ ಮಠ ಮುಂಚುಣಿಯಲ್ಲಿದೆ ಎಂದರು.
ಕುಂಟೋಜಿಯ ಡಾ, ಚನ್ನವೀರ ದೇವರು ಮಾತನಾಡಿ ದೇಶದಲ್ಲಿ ಭಾರತೀಯ ಸಂಸ್ಕøತಿ ಉಳಿಯುತ್ತಿದ್ದರೆ ಅದು ವೀರ ಶೈವ ಮಠಗಳಿಂದ ಮಾತ್ರ ದಾಸೋಹ ಪದ್ದತಿ ಸೇರಿದಂತೆ ಹಿಂದೂ ಸಂಪ್ರದಾಯವನ್ನು ಉಳಿಸುವ ಕಾರ್ಯವನ್ನ ಶ್ರೀಮಠಗಳು ನಿರಂತರವಾಗಿ ಮಾಡುತ್ತಿವೆ. ಇಲ್ಲಿ ನಡಿದಿರುವ ಸಾಮೂಹಿಕ ವಿವಾಹ ಭಾಗ್ಯದ ವಿವಾಹವಾಗಿವೆ, ರಾಜ್ಯದಲ್ಲಿ ಇಂತಹ ಸಾಮೂಹಿಕ ವಿವಾಹಗಳು ಹೆಚ್ಚಾಗಬೇಕು ಇದರಿಂದ ದುಂದು ವೆಚ್ಚಕ್ಕೆ ಕಡಿವಾಣ ಬಿಳಲಿದ್ದು ಬಡ ಕುಟುಂಭಗಳಿಗೆ ಅನುಕೂಲವಾಗಲಿದೆ ಎಂದರು.
ಈ ಸಂಧರ್ಭದಲ್ಲಿ ಮಾಜಿ ಸಚಿವ ಎಸ್,ಕೆ, ಬೆಳ್ಳುಬಿ, ಮುಖಂಡರಾದ ಅಪ್ಪುಗೌಡ ಪಾಟೀಲ, ಚಂದ್ರಶೇಖರಗೌಡ ಪಾಟೀಲ, ರಮೆಶ ಸೂಳಿಬಾವಿ, ಮಂಜುನಾಥ ಕೊಪ್ಪದ, ಸಿದ್ದಪ್ಪಾ ಬಾಲಗೊಂಡ, ಎಲ್, ಸಿ ಕಟ್ಟಿ, ಸೇರಿದಂತೆ ಮುಂತಾದವರು ಇದ್ದರು. ಡಾ, ಅಮರೇಶ ಮಿಣಜಗಿ ಸ್ವಾಗತಿಸಿದರು, ಗಿರಿಜಾ ಪಾಟೀಲ ನಿರೂಪಿಸಿ ವಂದಿಸಿದರು.