ಉಸಿರುಗಟ್ಟಿಸಿ ಪ್ರೇಯಸಿ ಕೊಂದು ಆತ್ಮಹತ್ಯೆಗೆ ಯತ್ನ ಪ್ರಿಯಕರ ಸೆರೆ

ಬೆಂಗಳೂರು, ಮಾ.೧೫- ಪ್ರೀತಿಸಿದ ಯುವತಿಯ ಜೊತೆ ಬಲವಂತದ ಲೈಂಗಿಕ ಕ್ರಿಯೆ ನಡೆಸಿ ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಪ್ರಿಯಕರನೇ ಕೊಲೆ ಮಾಡಿರುವ ಘಟನೆ ವಿಲ್ಸನ್ ಗಾರ್ಡನ್ ನಲ್ಲಿ ನಡೆದಿದೆ.
ವಿಲ್ಸನ್ ಗಾರ್ಡನ್ ನ ವಿನಾಯಕನಗರದ ಶಾಲಿನಿ ಕೊಲೆಯಾದ ಯುವತಿ, ಶಾಲಿನಿ ಮತ್ತು ಆಕೆಯ ಪ್ರಿಯಕರ ಆರೋಪಿ ಮನೋಜ್ ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ರಸ್ತೆಯ ಅಭಿವೃದ್ಧಿ ಕಾಮಗಾರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮನೋಜ್ ಹಾಗೂ ಶಾಲಿನಿ ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಶಾಲಿನಿಗೆ ಬೇರೆ ಯುವಕನ ಜೊತೆಗೆ ಮದುವೆ ನಿಶ್ಚಿಯ ಮಾಡಲಾಗಿತ್ತು.
ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದ್ದು ನಿನ್ನೆ ಸಂಜೆ ಶಾಲಿನಿ ನಿವಾಸಕ್ಕೆ ಯಾರೂ ಇಲ್ಲದಿರುವುದನ್ನು ತಿಳಿದು ಬಂದಿದ್ದ ಮನೋಜ್, ಮನೋಜ್ ‘ನೀನು ಒಪ್ಪಿಕೊಂಡಿದ್ದಿಯಾ ಮನೆಯವರು ತೋರಿಸಿದ ಹುಡುಗನನ್ನು ಎಂದು ಜಗಳ ತೆಗೆದಿದ್ದಾನೆ.
ಜಗಳ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡು ಆಕೆಯನ್ನು ದಿಂಬಿನಿಂದ ಉಸಿರುಗಟ್ಟಿಸಿದ್ದು ಪ್ರಜ್ಞೆ ತಪ್ಪಿ ಗಂಭೀರ ಸ್ಥಿತಿಗೆ ತಲುಪಿದ್ದನ್ನು ಕಂಡು ಪರಾರಿಯಾಗಿ ಕೆ.ಪಿ ಅಗ್ರಹಾರದ ಮನೆಗೆ ಹೋಗಿ ಮನೋಜ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಗಂಭೀರ ಸ್ಥಿತಿಯಲ್ಲಿದ್ದ ಮನೋಜ್?ನನ್ನು ಕುಟುಂಬದವರು ಅಸ್ಪತ್ರೆಗೆ ದಾಖಲು ಮಾಡಿದ್ದಾರೆ.ಇತ್ತ ಶಾಲಿನಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಕೆಯ ಕುಟುಂಬದವರು ವಿಲ್ಸನ್ ಗಾರ್ಡನ್ ಪೊಲೀಸರಿಗೆ ದೂರು ದಾಖಲು ಮಾಡಿದ್ದಾರೆ. ಇನ್ನು ರಾತ್ರಿಯೇ ಮೃತ ಶಾಲಿನಿಯನ್ನು ಅಸ್ಪತ್ರೆಗೆ ದಾಖಲು ಮಾಡಿಸಿದ್ದ ಕುಟುಂಬ, ಈ ವೇಳೆ ಯುವತಿಯ ಗುಪ್ತಾಂಗದಲ್ಲಿ ರಕ್ತಸ್ರಾವ ಹಾಗೂ ಗಾಯದ ಗುರುತು ಪತ್ತೆಯಾಗಿದೆ.
ವೈದ್ಯಕೀಯ ಪರೀಕ್ಷೆ ವೇಳೆ ಬಲವಂತದ ಲೈಂಗಿಕ ಕ್ರಿಯೆ ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕೊಲೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ ಇನ್ಸ್‌ಪೆಕ್ಟರ್ ರಾಜು ಅವರು ಕಾರ್ಯಾಚರಣೆ ಕೈಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.