ಉಸಿರಿರುವವರೆಗೂ ಕ್ಷೇತ್ರಾಭಿವೃದ್ಧಿಗೆ ಬದ್ಧ: ಶಾಸಕ ಶರಣು ಸಲಗರ

ಬಸವಕಲ್ಯಾಣ: ಜೂ.8:ನಿಮ್ಮ ಕೆಲಸ-ಕಾರ್ಯಗಳನ್ನು ಮಾಡಲು, ಸಮಸ್ಯೆಗಳನ್ನು ಬಗೆಹರಿಸಲು ನನ್ನನು ನೀವು ಸೇವಕನಾಗಿ ಚುನಾಯಿಸಿದ್ದೀರಿ. ನನ್ನೋಳಗೆ ಉಸಿರಿರುವವರೆಗೂ ಕ್ಷೇತ್ರಾಭಿವೃದ್ಧಿಗಾಗಿ ಶ್ರಮಿಸುವೆ ಎಂದು ಶಾಸಕ ಶರಣು ಸಲಗರ ಹೇಳಿದರು.

ಭಾನುವಾರ ಪರತಾಪೂರ, ತಳಭೋಗ ಹಾಗೂ ಮೋರಖಂಡಿ ಗ್ರಾಮಗಳಲ್ಲಿನ 1800 ಕುಟುಂಬಗಳಿಗೆ ಫುಡ್‍ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಕರೊನಾ ಸೋಂಕು ಇಡೀ ಜಗತ್ತನ್ನೇ ತುದಿಗಾಲಿನಲ್ಲಿ ನಿಲ್ಲಿಸಿದೆ. ಅದು ಎಲ್ಲರ ಬದುಕನ್ನು ಅಕ್ಷರಶಃ ದುಸ್ತರಗೊಳಿಸಿದೆ. ಕರೊನಾ ನಿಮಿತ್ತ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೊಳಗಾದವರಿಗೆ ನನ್ನ ಕೈಲಾದಷ್ಟು ದಿನಸಿ ಸಹಾಯ ಮಡುತ್ತಿದ್ದೇನೆ. ಕ್ಷೇತ್ರದ ಜನತೆಯ ಹಿತ ಕಾಪಾಡುವುದು ನನ್ನ ಕರ್ತವ್ಯವಾಗಿದೆ. ಕರೊನಾದಿಂದ ದೂರಿರಲು ಸ್ವಚ್ಛತೆ, ಸುರಕ್ಷತೆ ಹಾಗೂ ಲಸಿಕೆಯೇ ಮಂತ್ರವಾಗಿದೆ ಎಂದರು.

ಕಳೆದ ಭಾನುವಾರ ಶಾಸಕರು ಅಭಿಯಾನಕ್ಕೆ ಚಾಲನೆ ನೀಡಿದ್ದು ಸಿರಗಾಪೂರ ಇನ್ನಿತರೆ ಗ್ರಾಮಗಳು ಸೇರಿದಂತೆ 1250 ಹಾಗೂ ಮಂಗಳವಾರ, ಗುರುವಾರ ಹಾಗೂ ಶುಕ್ರವಾರದಂದು ತಾಲ್ಲೂಕಿನ ಜಾಜನಮುಗುಳಿವಾಡಿ, ಮದನೇವಾಡಿ, ಘೋಟಾಳವಾಡಿ, ಬಂಡಗರವಾಡಿ, ಜೋಗೇವಾಡಿ, ಮದರವಾಡಿ, ನವಚಂದವಾಡಿ, ಫುಲದರವಾಡಿ, ಚಿಟ್ಟಾ (ಕೆ), ಚಿಟ್ಟಾ (ಕೆ) ತಾಂಡಾ ಹಾಗೂ ಹಂದ್ರಾಳ (ಆರ್) ಈ 11 ಗ್ರಾಮಗಳಲ್ಲಿ 4950 ಕುಟುಂಬಗಳಿಗೆ ಕಿಟ್‍ಗಳನ್ನು ವಿತರಿಸಿದ್ದಾರೆ. ಇದುವರೆಗೆ ಶಾಸಕರು ತಾಲ್ಲೂಕಿನ ಒಟ್ಟು 18 ಗ್ರಾಮಗಳಲ್ಲಿ 8000 ಬಡ ಕುಟುಂಬಗಳಿಗೆ ಕಿಟ್‍ಗಳನ್ನು ನೀಡಿ ಸಂಕಷ್ಟಕ್ಕೊಳಗಾದವರಿಗೆ ಸಾಂತ್ವನ ಹೇಳಿದ್ದಾರೆ.

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಗ್ರಾಮೀಣ ಘಟಕಾಧ್ಯಕ್ಷ ಅಶೋಕ ವಕಾರೆ, ಹಣಮಂತ ದರ್ಜೆ, ಸುಭಾಷ್ ಕುದುರೆ, ಬಂಡೇರಾಯ ಕುಲಕರ್ಣಿ, ನಂದು ಕುಲಕರ್ಣಿ, ಮಲ್ಲಪ್ಪ ಮಹಾಜನ, ಶಿವಕುಮಾರ ಸ್ವಾಮಿ, ನವನಾಥ ಸಾಳುಂಕೆ, ರವಿ ಫುಲಾರೆ, ಬಸವರಾಜ ಪಾಟೀಲ್, ವಿಠ್ಠಲ್ ಮುಳೆ, ಬಸವರಾಜ ಉಸ್ತುರೆ ಮತ್ತಿತರರು ಇದ್ದರು.