ಉಸಿರಾಟದ ಸಮಸ್ಯೆ ಬಂದರೆ ನಿರ್ಲಕ್ಷ್ಯ ಸಲ್ಲದು

ಜಗಳೂರು.ಏ.೩೦; ಪಟ್ಟಣದ ಸಾರ್ವಜನಿಕರಿಗೆ ತಿಳಿ ಪಡಿಸುವುದೇನೆಂದರೆ ಕೋವಿಡ್-19 ಕೊರೋನ ವೈರಸ್ ಹರಡುತ್ತಿರುವುದರಿಂದ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕರು ತಮಗೆ ಕೆಮ್ಮು. ಶೀತ. ಜ್ವರ. ಕಣ್ಣುಕೆಂಪಗಾಗುವುದು. ತಲೆನೋವು.ವಿಪರೀತ ಸುಸ್ತು ಉಸಿರಾಟದ ತೊಂದರೆ.ಮೂಗು ಕಟ್ಟುವುದು ಎದೆಯಲ್ಲಿ ಕಫ ಕಟ್ಟುವುದು.ಹಸಿವಾಗದಿರುವುದು.ವಾಸನೆ ಹಾಗೂ ರುಚಿ ಗುರುತು ಹಿಡಿಯದ ಆಗದಿರುವುದು. ವಾಂತಿ.ಭೇದಿ ಹೊಟ್ಟೆ ನೋವು. ಈ ರೀತಿ ಯಾವುದೇ ಅನಾರೋಗ್ಯದ ತೊಂದರೆ ಆದಲ್ಲಿ ತಾವೇ ಸ್ವತಃ ಮನೆಯಲ್ಲಿ  ತಾತ್ಕಾಲಿಕವಾಗಿ ಚಿಕಿತ್ಸೆ ಪಡೆದುಕೊಂಡು ರೋಗ ಲಕ್ಷಣಗಳ ಬಗ್ಗೆ ನಿರ್ಲಕ್ಷ ವಹಿಸಬಾರದು ಈ ತರಹದ ತೊಂದರೆಗಳು ಕಂಡು ಬಂದ ಕೂಡಲೇ ಸಾರ್ವಜನಿಕ ಆಸ್ಪತ್ರೆ ಅಥವಾ ಅಧಿಕೃತ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯವಾಗಿದೆ ಮನೆಯಲ್ಲಿಯೇ ತಾತ್ಕಾಲಿಕ ಚಿಕಿತ್ಸೆ ಪಡೆದುಕೊಂಡು ರೋಗಲಕ್ಷಣಗಳನ್ನು ವಿಪರೀತಗೊಂಡು ಕೊನೆಯ ಹಂತದಲ್ಲಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು ನೋವು ಉಂಟು ಆಗುವುದರಿಂದ ಇದನ್ನು ತಪ್ಪಿಸಲು ಸಾರ್ವಜನಿಕರು ಯಾವುದೇ ಆರೋಗ್ಯ ತೊಂದರೆ ಆದ ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಮೂಲಕ ತಿಳಿಪಡಿಸಿದೆ  ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜು ಡಿ ಬಣಕರ್ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ