
ಯಾದಗಿರಿ, ಏ.15: ಜಿಲ್ಲೆಯ ವಡಗೇರಿ ತಾಲ್ಲೂಕಿನ ಉಳ್ಳೆಸುಗೂರು ಗ್ರಾಮದಲ್ಲಿ ಈ ಹಿಂದೆ ಅತಿವೃಷ್ಟಿ ಯಿಂದ ಬೆಳೆ ಮತ್ತು ಮನೆಗಳ ಹಾನಿಗೆ ಪರಿಹಾರ ವಿತರಣೆ ಮಾಡುವಲ್ಲಿ ತಾರತಮ್ಯ ಮಾಡಿ ಮನಬಂದಂತೆ ಹಣ ಕೊಟ್ಟವರಿಗೆ ಒಂದು ಕೊಡದವರಿಗೆ ಒಂದು ಪರಿಹಾರ ವರದಿ ಸಲ್ಲಿಸಿ ಅನ್ಯಾಯ ಮಾಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅವರನ್ನು ಅಮಾನತು ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಹಾಗೂ ಗ್ರಾಮದ ಪ್ರಮುಖರು ನೀಡಿದ ದೂರಿನನ್ವಯ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು ಅಪರಾಧ ಸಾಬೀತಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಿಗ ಗೊಲ್ಲಾಳಪ್ಪ ಇವರನ್ನು ಅಮಾನತು ಮಡಿ ಆದೇಶ ಹೊರಿಡಿಸಿದ್ದಾರೆ.
ರಾಜ್ಯ ಸರ್ಕಾರ ಅತಿವೃಷ್ಟಿಯಿಂದ ಅನ್ಯಾಯಕ್ಕೊಳಗಾದ ರೈತರಿಗೆ ಮನೆ ಹೊಲದಲ್ಲಿ ಆದ ನಷ್ಟಕ್ಕೆ ಪ್ರತಿಯಾಗಿ ಆಸರೆಯಾಗಲಿ ಎಂಬ ಕಾರಣಕ್ಕೆ ಪರಿಹಾರ ನೀಡುತ್ತದೆ. ಆದರೆ ಇಂತಹ ಬ್ರಷ್ಟ ಸಿಬ್ಬಂದಿಗಳು ತಮ್ಮ ಮನೆಯಿಂದ ಕೊಡುವಂತೆ ವರ್ತಿಸಿ ಫಲಾನುಭವಿಗಳಿಂದಲೇ ಹಣವನ್ನು ದೋಚುತ್ತಾ ಅರ್ಹ ಬಡ ಫಲಾನುಭವಿಗಳಿಗೆ ದ್ರೋಹ ಮಾಡುತ್ತಿದ್ದಾರೆ. ಇಂತಹವರನ್ನು ಸುಮ್ಮನೆ ಬಿಡಬಾರದು. ಅವರನ್ನು ಅಮಾನತು ಆದ ಮೇಲೂ ಗುರುಮಠಕಲ್ ಭಾಗದಲ್ಲಿ ಕೆಲಸಕ್ಕೆ ನಿಯೋಜನೆಗೊಂಡಿರುತ್ತಾನೆ ಇದು ನಾಚಿಕೆ ಗೇಡಿನ ಸಂಗತಿಯಾಗಿದೆ.
ಅಲ್ಲಿಯೂ ಕಡುಬಡವರು, ಗಡಿ ಭಾಗದ ತಾಲ್ಲೂಕಿನಲ್ಲಿನ ಬಡ ಜನರಿಗೆ ಅಲ್ಲಿಯೂ ಮೋಸ ಮಾಡುವ ಸಾಧ್ಯತೆ ಇರುತ್ತದೆ ಆದ್ದರಿಂದ ಈತನಿಂದ ಮುಚ್ಚಳಿಕೆ ಬರೆಸಿಕೊಂಡು ಆತನ ಮೇಲೆ ಹದ್ದಿನ ಕಣ್ಣು ಇಡಬೇಕು ಎಂದ ಅವರು ಆಗ್ರಹಿಸಿದಾರೆ.
ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿಗಳು ಮೇಲಧಿಕಾರಿಗಳ ಭಯವಿಲ್ಲದೇ ಬಹಿರಂಗವಾಗಿ ರಾಜಾರೋಷವಾಗಿ ಫೋನ್ ಪೇ ಮೂಲಕ ಲಂಚ ವಸೂಲಿ ಮಾಡುತ್ತಿರುವುದು ನಡೆದಿದೆ. ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಇವುಗಳು ತಡೆಯಲು ಕೆಲವರಿಗೆ ಜೈಲಿಗೆ ಕಳಿಸಬೇಕು ಅಂದಾಗ ಮಾತ್ರ ಭಯದಿಂದ ಇಂತಹ ಕೃತ್ಯಗಳು ಆಗುವುದು ತಡೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನಿರಂತರ ಹೋರಾಟ ಮಾಡಿದ ನನ್ನ ಹೋರಾಟಕ್ಕೆ ಇದು ಸಂದ ಜಯವಾಗಿದೆ ಎಂದು ಅವರು ಹೇಳಿದ್ದಾರೆ.
ಈ ವೇಳೆ ಶರಣಪ್ಪ ಹದನೂರ, ದೇವಪ್ಪ, ಕವಲಿ, ಬಸಯ್ಯ ಸ್ವಾಮಿ, ಮಹಮ್ಮದ್ ರಫೀ, ಮೋಯಿನ್, ಶರಣಪ್ಪ ಪೂಜಾರಿ ಸೇರಿ ಅನೇಕರಿದ್ದರು.