ಉಳ್ಳಾಗಡ್ಡಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ

ಕಲಬುರಗಿ ಏ 28: ಕಲಬುರಗಿ ಅಫಜಲಪುರ ಹೆದ್ದಾರಿಯ ಹಡಗಿಲ ಹಾರತಿ ಕ್ರಾಸ್ ಹತ್ತಿರ ಇಂದು ಬೆಳಿಗ್ಗೆ ಉಳ್ಳಾಗಡ್ಡಿ ಚೀಲಗಳನ್ನು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿದೆ.
ಘಟನೆಯಲ್ಲಿ ಟ್ರ್ಯಾಕ್ಟರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.ರಸ್ತೆ ತುಂಬ ಉಳ್ಳಾಗಡ್ಡಿ ಚಲ್ಲಾಡಿವೆ.ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದ ಉಳ್ಳಾಗಡ್ಡಿಗಳನ್ನು ಆರಿಸಿ ತುಂಬುವ ಕಾರ್ಯ ನಡೆದಿದೆ.