ಉಳೇನೂರ ಕುಡಿಯುವ ನೀರಿನ ಟ್ಯಾಂಕ್ ಗೆ ಚಾಲನೆ

ಕಾರಟಗಿ:ಜೂ:09: ಇಂದು ಕಾರಟಗಿ ತಾಲೂಕಿನ ಉಳೇನೂರ ಗ್ರಾಮದ ೧ ನೇ ವಾರ್ಡಿನಲ್ಲಿ ಶ್ರೀ ದ್ಯಾವಮ್ಮದೇವಿ ದೇವಸ್ಥಾನದ ಆವರಣದಲ್ಲಿ ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯರಿಂದ ನೇರವೇರಿಸಿದರು,
ಕುಡಿಯುವ ನೀರಿನ ಪೂಜಾ ಕಾರ್ಯವನ್ನು ಗ್ರಾಮದ ಪೂಜ್ಯ ಶ್ರೀ ಬಸವರಾಜಸ್ವಾಮಿ ಹಿರೇಮಠ ಅವರು ನೆರವೇರಿಸಿದರು.
ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ಮೂಲ ಸೌಕರ್ಯದ ಅವಶ್ಯಕತೆ ಮನಗಂಡು ಕಡಿಮೆ ಅವಧಿಯಲ್ಲಿ ಈ ಮಹತ್ಕಾರ್ಯ ಮಾಡಿರುವುದು ಪ್ರಶಂಸನೀಯವಾಗಿದ್ದು, ಇದೇ ತರ
ಗ್ರಾಮದ ನೈರ್ಮಲ್ಯ ಹಾಗೂ ಆರೋಗ್ಯಕ್ಕೆ ಒತ್ತು ಕೊಡುವ ಭರವಸೆಯನ್ನು ಎಲ್ಲಾ ಸದಸ್ಯರು ಪ್ರತಿಜ್ಞಾವಿಧಿ ತೆಗೆದುಕೊಂಡರು,
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಈರಮ್ಮ ಗಂಡ ಸಣ್ಣದೇವಣ್ಣ ಮೈಲಾಪೂರು. ದೇವರಾಜ್ ಹ್ಯಾಟಿ, ಪರಸಪ್ಪ ಪಾಳೇ. ಜಯಶ್ರೀ ಪಾಟೀಲ್. ಹನುಮಂತಪ್ಪ ಕಾರಟಗಿ,ಮಾರೆಪ್ಪ ಹರಿಜನ ಮತ್ತು ಮುಖಂಡರಾದ ಲಕ್ಷ್ಮಣ ಕಾರಟಗಿ, ಮಲ್ಲೆಗೌಡ್ರು ಪಾಟೀಲ್, ಸಿದ್ದಪ್ಪ ಮೈಲಾಪೂರು. ಕೆ.ಹುಲಿಗೆಪ್ಪ ಪಾಳೇ. ಪಕೀರಪ್ಪ ಕಾರಟಗಿ.ಹಳ್ಳದ ನಾಗರಾಜ್. ಈರಣ್ಣ ಈಡಿಗೇರ್. ಮಲ್ಲೆಪ್ಪ ಹುಳ್ಕಿಹಾಳ್. ಗಾದಿಲಿಂಗಪ್ಪ ಹರಿಜ.ಯುವಕ ಮಿತ್ರರಾದ ರಮೇಶ್ ನಾಯಕ. ರಾಘು ವಕೀಲರು. ಯಮನೂರು ಕಾರಟಗಿ. ಶ್ರೀನಿವಾಸ ಭೋವಿ. ರಾಮು ಗಂಡೋಳ್ಳಿ. ರುದ್ರಪ್ಪ ಮಣ್ಣೂರು.ಹನುಮೇಶ್ ಮಣ್ಣೂರು. ದೇವರಾಜ್ ಗ್ರಂಥಪಾಲಕ. ಹಾಗೂ ವಾರ್ಡಿನ ಮಹಿಳೆಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.