ಉಳಿತಾಯ ಬಜೆಟ್ ಮಂಡನೆ

ಶಿರಹಟ್ಟಿ,ಮಾ17: ಪಟ್ಟಣದ ಅಭಿವೃದ್ದಿ ಪೂರಕವಾದ ಉಳಿತಾಯ ಬಜೆಟ್‍ನ್ನು ಪಪಂ ಅಧ್ಯಕ್ಷ ಗಂಗಮ್ಮ ಆಲೂರ ಮಂಡಿಸಿದರು.
ಅವರು ಶಿರಹಟ್ಟಿ ಪಟ್ಟಣದ ಪಂಚಾಯತ ಸಭಾಭವನದಲ್ಲಿ 2023-24 ನೇ ಸಾಲಿಗಾಗಿ 11ಲಕ್ಷ 48 ಸಾವಿರ ಉಳಿತಾಯ ಬಜೆಟ್ ಮಂಡಿಸಿದರು. ಪಟ್ಟಣದ ಎಲ್ಲಾ ವಾರ್ಡಗಳ ಅಭಿವೃದ್ದಿಯನ್ನು ಗಮನದಲ್ಲಿ ಇಟ್ಟುಕೊಂಡು ಮೂಲಭೂತ ಸೌಲಭ್ಯ ಒದಗಿಸುವುದಕ್ಕಾಗಿ ಸಾಕಷ್ಟು ಮೊತ್ತದ ಅನುದಾನವನ್ನು ಮೀಸಲಿಟ್ಟು, ಎಸ್‍ಸಿ ಎಸ್‍ಟಿ ಸಮುದಾಯದ ಅಭಿವೃದ್ಧಿಗಾಗಿ ದಿನಗೂಲಿ ನೌಕರರ ವೇತನ, ಹೊರಗುತ್ತಿಗೆ ಕಂಪ್ಯೂಟರ ಆಪರೇಟ್‍ರ ವೇತನ ನೀರು ಸರಬರಾಜು, ಬೀದಿ ದೀಪ , ಕುಡಿಯುವ ನೀರು, ಆರೋಗ್ಯ ಉದ್ಯಾನವನ ಹಲವಾರು ಅಭಿವೃದ್ದಿ ಪರ ಯೋಜನೆಗಳನ್ನು ಮುಂಗಡ ಪತ್ರದಲ್ಲಿ ತಿಳಿಸಿದ್ದಾರೆ. ನಮ್ಮ ಸಂಪೂರ್ಣ ಅವಧಿಯ ದಿನಗಳಲ್ಲಿ ಉತ್ತಮವಾದ ಆಡಳಿತ ನೀಡಲು ಸರ್ವ ಸದಸ್ಯರ ಜೊತೆಗೆ ಪಟ್ಟಣದ ಜನತೆ ಸಹಕಾರ ಅಗತ್ಯವಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಉಪಾದ್ಯಕ್ಷ ದೇವಪ್ಪ ಆಡೂರ ಸ್ಥಾಯಿ ಸಮಿತಿ ಅಧ್ಯಕ್ಷ ಮುಸ್ತಾಕ ಚೋರಗಸ್ತಿ ಮಂಜುನಾಥ ಗಂಟಿ, ಪರಮೇಶ ಪರಬ, ನೀಲವ್ವ ಹುಬ್ಬಳ್ಳಿ, ಮಹದೇವಪ್ಪ ಗಾಣಿಗೇರ, ಅಸರತಲಿ ಢಾಲಾಯತ, ಸಂದೀಪ ಕಪ್ಪತ್ತನವರ, ಫಕ್ಕಿರೇಶ ರಟ್ಟಿಹಳ್ಳಿ, ದಾವಲಬಿ ಮಾಚೇನಹಳ್ಳಿ, ದೇವಕ್ಕ ಗುಡಿಮನಿ,ಅನೀಲ ಮಾನೆ, ಮುಖ್ಯಾದಿಕಾರಿ, ಸಿದ್ದರಾಯ ಕಟ್ಟಿಮನಿ, ಹಾಗೂ ಪಪಂ ಅಧಿಕಾರಿಗಳು ಉಪಸ್ಥಿತರಿದ್ದರು.