ಉರ್ಫಿ ಹೊಸ ವಿಡಿಯೋ ವೈರಲ್

ಹೈದರಾಬಾದ್,ಅ.೩-ಉರ್ಫಿ ಜಾವೇದ್ ತನ್ನ ಫ್ಯಾಷನ್‌ನಿಂದ ಫುಲ್ ಫೇಮಸ್ ಆಗಿದ್ದಾರೆ. ಆಗಾಗ ಭಾರೀ ಟ್ರೋಲ್‌ಗೆ ಒಳಗಾಗಿ ಖಡಕ್ ಉತ್ತರವನ್ನೇ ಕೊಡುತ್ತಾರೆ. ಇದೀಗ ಉರ್ಫಿ ಹೊಸ ವಿಡಿಯೋ ವೈರಲ್ ಆಗಿದೆ.
ನಟಿ ಉರ್ಫಿ ಜಾವೇದ್ ತನ್ನ ವಿಭಿನ್ನ, ವಿಚಿತ್ರ ಫ್ಯಾಷನ್ ಮೂಲಕವೇ ಜನಪ್ರಿಯರಾಗಿದ್ದಾರೆ.
ಉರ್ಫಿ ಸೋಶಿಯಲ್ ಮೀಡಿಯಾದಲ್ಲಿ ಮೈ ಕಾಣುವ ಬಟ್ಟೆ ಧರಿಸಿ ಉರ್ಫಿ ಸದಾ ಸುದ್ದಿಯಲ್ಲಿರುತ್ತಾರೆ.
ಉರ್ಫಿ ಬ್ಲ್ಯಾಕ್ ಫ್ಲೋರೆಡ್ ಡ್ರೆಸ್ ತೊಟ್ಟು ಮಿಂಚುತ್ತಿದ್ದಾರೆ. ಆಫ್-ದ-ಶೋಲ್ಡರ್ ಬ್ರ್ಯಾಲೆಟ್‌ನೊಂದಿಗೆ ಜೋಡಿಯಾಗಿದ್ರು. ಗುಲಾಬಿ-ಬಣ್ಣದ ಕೂದಲಿನಲ್ಲಿ ನಟಿ ಮಿಂಚುತ್ತಿದ್ರು. ಟ್ರೆಂಡಿ ಬಾರ್ಬಿ ರೀತಿ ಕಾಣುತ್ತಿದ್ದಾರೆ.
ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ ಮೂಲಕ ಸಂಚಲನ ಮೂಡಿಸಿದ್ದಾರೆ.
ತನ್ನ ವಿಲಕ್ಷಣವಾದ ಫ್ಯಾಶನ್ ಸ್ಟೈಲ್ ಮತ್ತು ಬಟ್ಟೆಗಾಗಿ ಟ್ರೋಲ್ ಆಗುವ ಉರ್ಫಿ ಟ್ರೋಲರ್ಗಳಿಗೆ ಸಖತ್ ಆಗಿಯೇ ಉತ್ತರವನ್ನು ನೀಡುತ್ತಾರೆ. ಟ್ರೋಲರ್ಗಳ ವಿರುದ್ಧ ಕಿಡಿಕಾರಿದ ಉರ್ಫಿ, ಪೊಲೀಸ್ ಕಂಪ್ಲೇಂಟ್ ಕೊಟ್ಟ ಉದಾಹಣೆ ಕೂಡ ಇದೆ.