ಉರ್ಫಿಗೆ ಸಾಕ್ಷಿ ಪೈಪೋಟಿ

ಮುಂಬೈ,ಮೇ.೩೦-ತುಂಡುಡುಗೆ ತೊಟ್ಟು ಹಾದಿ ಬೀದಿಯಲ್ಲಿ ತಿರುಗಾಡುತ್ತಾ ಗಮನ ಸೆಳೆಯುತ್ತಿರುವ ಹಿಂದಿ ಒಟಿಟಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೆದ್‌ಗೆ ಪೈಟೋಟಿ ನೀಡಲು ಮತ್ತೊಬ್ಬ ಹಾಟ್ ಬೆಡಗಿ ಬಂದಿದ್ಧಾರೆ ಅವರೇ ಸಾಕ್ಷಿ ಚೋಪ್ರಾ.
ಸಾಕ್ಷಿ ಚೋಪ್ರಾ ಅವರು ರಾಮಾಯಣಖ್ಯಾತಿಯ ರಮಾನಂದ್ ಸಾಗರ್ ಅವರ ಮೊಮ್ಮಗಳು ಎನ್ನುವುದು ಗಮನ ಸೆಳೆಯುವ ಸಂಗತಿ. ಸಾಕ್ಷಿ ಮಾಡೆಲ್, ಗಾಯಕಿ ಮತ್ತು ಗೀತರಚನೆಕಾರಾಗಿ ಗುರುತಿಸಿಕೊಳ್ಳುವ ತವಕದಲ್ಲಿದ್ದಾರೆ.
ಕಳೆದೆರಡು ವರ್ಷಗಳಲ್ಲಿ ಉರ್ಫಿ ಜಾವೇದ್ ಮಾಡುತ್ತಿರುವ ಆವಾಂತರಗಳನ್ನು ಮೀರಿಸುವ ರೀತಿ ಸಾಕ್ಷಿ ಚೋಪ್ರಾ ತನ್ನ ಕನಿಷ್ಠ ತುಂಡುಡುಗೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಉರ್ಫಿ ಜಾವೇದ್ ಅವರು ವಿಲಕ್ಷಣವಾದ ಉಡುಪುಗಳಿಗಾಗಿ ಅಂತರ್ಜಾಲದಲ್ಲಿ ಜನಪ್ರಿಯರಾಗಿದ್ದಾರೆ, ಅದು ಅನೇಕ ಬಾರಿ ಜನರ ಕೆಂಗಣ್ಣಿಗೂ ಗುರಿಯಾಗಿದ್ಧಾರೆ. ಇದೀಗ ಸಾಕ್ಷಿ ಚೋಪ್ರಾ ಊರ್ಫಿಗೆ ಪೈಪೋಟಿ ನೀಡಲು ಬಂದಿದ್ದಾರೆ.

ಸಾಕ್ಷಿ ಧರಿಸುವ ಕನಿಷ್ಟ ಬಟ್ಟೆ ನೋಟಿ ಊರ್ಫಿ ಜಾವೆದ್ ಮೈಮೇಲೆ ಹಾಕುವ ಕನಿಷ್ಠ ಬಟ್ಟೆಯನ್ನು ಬಿಚ್ಚೆಸೆದರೆ ಆಶ್ಚರ್ಯವಿಲ್ಲ ಎಂದು ಬಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಬಾಲಿವುಡ್ ಅಂಗಳದಲ್ಲಿ ಇದುವರೆಗೂ ಪಾಪರಾಜಿಗಳ ನೆಚ್ಚಿನ ತಾರೆಯಾಗಿದ್ದ ಊರ್ಫಿ ಜಾಗಕ್ಕೆ ಇದೀಗ ಸಾಕ್ಷಿ ಚೋಪ್ರಾ ಬಂದಿದ್ದಾರೆ. ಇದು ಬಾಲಿವುಡ್ ಬಿಚ್ಚಮ್ಮಂದಿರಿಗೆ ಹೊಟ್ಟೆ ಉರಿಯುವಂತೆ ಮಾಡಿದೆ.

ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆಯಂತಹ ದೊಡ್ಡ ತಾರೆಯರಿಗಿಂತ ಹೆಚ್ಚಾಗಿ ಊಫೀ ಜಾವೆದ್ ಕನಿಷ್ಟ ಬಟ್ಟೆ ಹಾಕಿ ಗಮನ ಸೆಳೆಯುತ್ತಿದ್ದರು. ಆಕೆ ಎಲ್ಲಿ ಹೋದರೂ ಪಾಪರಾಜಿಗಳು ಆಕೆಯನ್ನು ಹಿಂಬಾಲಸುತ್ತಿದ್ದರು.ಇದೀಗ ಬಾಲಿವುಡ್ ಚಿತ್ರರಂಗದಲ್ಲಿ ಸಾಕ್ಷಿ ಚೋಪ್ರಾ ಸ್ಪರ್ಧೆ ನೀಡಲು ಬಂದಿದ್ದಾರೆ.