ಮಾನ್ವಿ,ಜು.೨೮- ಪಟ್ಟಣದ ಸರಕಾರಿ ಉರ್ದು ಪ್ರೌಢಶಾಲೆಯು ೧೯೯೮ ಆರಂಭವಾಗಿ ಇಲ್ಲಿಗೆ ೨೫ ವರ್ಷ ಪುರ್ಣಗೊಂಡು ಇಂದು ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು ಇದರಲ್ಲಿ ವಿಜ್ಞಾನ ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಸಚಿವರಾದ ಎನ್ ಬೋಸರಾಜ ಹಾಗೂ ಶಾಸಕ ಜಿ ಹಂಪಯ್ಯ ನಾಯಕ ಸಾಹುಕಾರ್, ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಮನಿ, ಶಾಲಾ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡ ಶಿವಪ್ರಿಯ ಸಹಕಾರಿಯ ಅಧ್ಯಕ್ಷ ಆರ್ ವೆಂಕಯ್ಯ ಶೆಟ್ಟಿ, ಅಧ್ಯಕ್ಷ ಮಹೆಬೂಬ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಅಶೋಕ ಕುಮಾರ್ ತಿಳಿಸಿದರು.
ನಂತರ ಮಾತಾನಾಡಿದ ಅವರು ನಮ್ಮ ಶಾಲೆಯಲ್ಲಿ ಈಗಾಗಲೇ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಅನೇಕ ಉತ್ತಮ ದರ್ಜೆಯ ಉದ್ಯೋಗದಲ್ಲಿದ್ದಾರೆ ಒಂದು ಶಾಲೆಯು ಸುದೀರ್ಘ ೨೫ ವರ್ಷ ಅತ್ಯುತ್ತಮ ಸಾಧನೆ ಮಾಡಬೇಕಾದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿರುತ್ತದೆ ಹಾಗೂ ಸ್ಥಳೀಯ ಆಡಳಿತ ವರ್ಗ, ಜನಪ್ರತಿನಿಗಳ ಸಹಕಾರ, ದತ್ತು ದಾನಿಗಳ ಸಹಕಾರ, ಶಾಲೆ ಆಡಳಿತ ಮಂಡಳಿಯ ಪ್ರೊತ್ಸಾಹ, ಶಿಕ್ಷಣದಿಕಾರಿಗಳ ಬೆಂಬಲ ಇವುಗಳಿಂದಾಗಿ ನಮ್ಮ ಶಾಲೆಯು ಕಳೆದ ಬಾರಿಯ ಮೆಟ್ರಿಕ್ ಫಲಿತಾಂಶದಲ್ಲಿ ೧೦೦% ಪ್ರತಿಶತ ಸಾಧನೆ ಮಾಡಲು ಸಾಧ್ಯವಾಯ್ತು, ಈ ವರ್ಷ ನಮ್ಮ ಶಾಲೆ ಆರಂಭವಾಗಿ ೨೫ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನೂತನ ಸಚಿವ ಎನ್ ಎಸ್ ಬೋಸರಾಜ ಇವರು ಭಾಗವಹಿಸಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು, ಶಿಕ್ಷಣ ಪ್ರೇಮಿಗಳು, ಶಿಕ್ಷಣ ಇಲಾಖೆಯವರು, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.