ಉರುಸ್ ಪ್ರಮುಖ ಧಾರ್ಮಿಕ ಕಾರ್ಯಕ್ರಮ

ಬಂಗಾರಪೇಟೆ.ಮಾ೭:ಮುಸ್ಲಿಂ ಧಾರ್ಮಿಕ ಉತ್ಸವಗಳಲ್ಲಿ ಉರುಸ್ ಅತ್ಯಂತ ಪ್ರಮುಖವಾದುದು, ಈ ಹಿನ್ನಲೆಯಲ್ಲಿ ಬಲಮಂದೆ ಗ್ರಾಮದಲ್ಲಿ ಸತತ ೨೭ ವರ್ಷಗಳಿಂದ ಆಚರಿಸುತ್ತಿದ್ದೇವೆ, ಈ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಂ ಭೇದಭಾವವಿಲ್ಲದೆ ಎಲ್ಲರೂ ಭಾಗವಹಿಸಲಿದ್ದಾರೆ, ಸೌಹಾರ್ದತೆ ಮತ್ತು ಭ್ರಾತೃತ್ವದ ಪ್ರತೀಕವಾಗಿ ಈ ಕಾರ್ಯಕ್ರಮ ಅದ್ದೂರಿ ನಡೆಯಲಿದೆ ಎಂದು ಆಸ್ತಾನ್-ಎ-ಘೌಸ್ ಪಾಕ್ ಕಾಜ್ ಗರಿಬನ್ ನವಾಜ್ ಅಧ್ಯಕ್ಷ ಸೈಯಾದ್ ನವಾಜ್ ಅವರು ಅಭಿಪ್ರಾಯಪಟ್ಟರು.
ತಾಲೂಕಿನ ಬಲಮಂದೆ ಗ್ರಾಮದ “ಶೆಹನ್ ಷಾ ಆಸ್ಥಾನ” ಮಸೀದಿಯಲ್ಲಿ ಕರೆಯಲಾಗಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಲಮಂದೆ ಗ್ರಾಮದಲ್ಲಿ “ಆಸ್ತಾನ್-ಇ-ಘೌಸ್ಸೆ ಪಾಕ್ ಕಾಜಾ ಗರಿಬನ್ ನವಾಜ್ ಟ್ರಸ್ಟ್ ವತಿಯಿಂದ ಮಾ.೮ ಶುಕ್ರ?ರವಾರ ರಂದು ೨೭ನೇ ವರ್ಷದ ಉರುಸ್ ಆಚರಿಸಲಾಗುತ್ತಿದೆ, ತಾಲೂಕಿನ ಎಲ್ಲಾ ನಾಗರೀಕರು ಈ ಉರುಸ್ ಕಾಠ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಉರುಸ್ ಕಾರ್ಯಕ್ರಮ ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತವಾಗಿದೆ. ಕಳೆದ ೨೭ವರ್ಷಗಳಿಂದ ಎಲ್ಲಾಧರ್ಮಿಯರು ಸೇರಿ ಆಚರಣೆ ಮಾಡುವ ಉರುಸ್ ತಾಲೂಕಿನಲ್ಲಿ ಒಂದು ವಿಶಿಷ್ಟ ಸ್ಥಾನ ಮಾನವಿದೆ. ಈ ಉರುಸ್ ಕಾರ್ಯಕ್ರಮದಲ್ಲಿ ಸರ್ವ ಧರ್ಮೀಯರಿಗೂ ಅಮಂತ್ರಣವಿದೆ.
ಮಾರ್ಚ್ ೮ರಂದು ಸಂದಲ್ ಶರೀಫ್ ಮೆರವಣಿಗೆ ಆಯೋಜಿಸಲಾಗಿದ್ದು ಮಲಮಂದೆ ಗ್ರಾಮದಿಂದ ಭೀಮಗಾನಹಳ್ಳಿಯವರೆಗೆ ಮೆರವಣಿಗೆ ಸಾಗಲಿದೆ, ನಂತರ ದರ್ಗಾದ ಆವರಣದಲ್ಲಿ ದೆಹಲಿ ಹಾಗೂ ಕೊಲ್ಲಾಪುರದ ಕವಾಲಿ ತಂಡದವರಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ದಿ ಹಾಗೂ ಹಣಕಾಸು ನಿಗಮ ಅಧ್ಯಕ್ಷ ಎಸ್.ಎನ್.ನಾರಾಯಣ ಸ್ವಾಮಿ, ಪೊಲೀಸ್ ನಿರೀಕ್ಷಕ ನಂಜಪ್ಪ, ಮತ್ತು ಕೃಷ್ಣರವರು ಭಾಗವಹಿಸಲಿದ್ದಾರೆ. ರಾತ್ರಿ ೮.೩೦ ಸುಮಾರಿಗೆ ಮಾನ್ಯ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವ್ಯವಸಾಯೋತ್ಪನ ಸೇವಾ ಸಹಕಾರಿ ಸಂಘದ ನಿರ್ದೇಶಕ ಪೆದ್ದಣ್ಣ ಮಾತನಾಡಿ ಉರುಸ್ ಕಾರ್ಯಕ್ರಮ ಸಾಮರಸ್ಯ ಬೇಸುಗೆಗೆ ಕಾರಣವಾಗಿದೆ ಟ್ರಸ್ಟ್ನ ಅಧ್ಯಕ್ಷ ಸಯ್ಯದ್ ನವಾಜ್ ರವರ ತಂದೆ ದಿವಂಗತ ಸಯ್ಯದ್ ಅಮ್‌ಜದ್ ಅವರು ಅತ್ಯಂತ್ಯ ಪ್ರಭಾವಿ ವ್ಯಕ್ತಿಯಾಗಿದ್ದರು, ಅಂದಿನಿಂದ ಇಂದಿನವರೆಗೆ ಹಿಂದೂಗಳ ಸಹಯೋಗದಲ್ಲಿ ಸ್ನೇಹಪೂರ್ವಕವಾಗಿ ಉರುಸ್ ಕಾರ್ಯಕ್ರಮ ಆಚರಿಸುತ್ತಿದ್ದರು. ತದನಂತರ ಅವರ ಮಕ್ಕಳು ಅಷ್ಟೇ ಗೌರವದಿಂದ ಬಲಮಂದೆ ಮತ್ತು ಭೀಮಗಾನಹಳ್ಳಿ ಗ್ರಾಮಸ್ಥರ ಸಹಯೋಗದಲ್ಲಿ ಆಚರಿಸುತ್ತಿದ್ದಾರೆ ಇದುವರೆಗೂ ಯಾವುದೆ ಅಹಿತಕರ ಘಟನೆಗಳು ನಡೆದಿಲ್ಲ ಇದು ನಮ್ಮ ಹೆಮ್ಮೆ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಸಯ್ಯದ್ ನಯಾಜ್, ಖಾದರ್, ಭಾಷಗೌಸ್, ಯಾರಬ್, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.