
ಲಕ್ಷ್ಮೇಶ್ವರ,ಏ30: ಪ್ರತಿವರ್ಷದಂತೆ ಈ ವರ್ಷವೂ ಲಕ್ಷ್ಮೇಶ್ವರ ಪಟ್ಟಣದ ದೂದಪೀರಾಂ 134 ನೇ ಉರುಸು ಮುಬಾರಕ ಆಚರಣೆ ಮಾಡುತ್ತಿದ್ದೇವೆ. ಈ ವರ್ಷವೂ ಅದ್ದೂರಿಯಾಗಿ ದೂದಪೀರಾಂ ಉರುಸು ಆಚರಣೆ ಮಾಡುತ್ತೇವೆ ಎಂದು ಸಾಹೇಬಜಾನ್ ಹವಾಲ್ದಾರ್ ಹೇಳಿದರು.
ಅವರು ಪಟ್ಟಣದ ಶಾದಿಮಹಲ್ ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ.
ದೂದಪೀರಾಂ ಉರುಸು ದಿನಾಂಕ 2 ರಿಂದ ಪ್ರಾರಂಭವಾಗಿ ದಿನಾಂಕ 4 ನೇ ತಾರೀಖನವರೆಗೆ ಆಚರಣೆ ಮಾಡಲಾಗುತ್ತದೆ ದಿನಾಂಕ 2 ತಾರೀಖಿಗೆ ಮಂಗಳವಾರದಂದು ಸಂದಲ್ ಮುಬಾರಕ ಸಾಯಂಕಾಲ 7.30.ಕ್ಕೆ ಜೂಲುಸದೊಂದಿಗೆ ದರ್ಗಾ ಕಮೀಟಿ ಮತ್ತು ಲಕ್ಷ್ಮೇಶ್ವರದ ಎಲ್ಲ ಹಾಜಿಗಳು ಹಾಗೂ ಪೇಶ ಇಮಾಮರವರಿಂದ ಗಂಧದ ಕಾರ್ಯಕ್ರಮ ನೆರೇವೇರಿಸಲಾಗುವುದು ದಿನಾಂಕ 3 ರಂದು ಬುಧವಾರ ಉರುಸು ಮುಬಾರಕ ಹಾಗೂ ಗಲೀಫ ಮತ್ತು ಪ್ರಸಿದ್ಧ ಬ್ಯಾಂಡ ಕಂಪನಿಗಳಾದ ತಾಜ ಗುಡಗೇರಿ ಮತ್ತು ನ್ಯಾಶನಲ್ ಕುಂದಗೋಳ ಬ್ಯಾಂಡ ಕಂಪನಿಗಳೊಂದಿಗೆ ತಾಜಮಹಲ ಮೆರವಣಿಗೆ ಮಧ್ಯಾಹ್ನ 2 ಗಂಟೆಗೆ ಜರಗುವುದು ರಾತ್ರಿ 9 ಘಂಟೆಗೆ ಗಲೀಫ ಕಾರ್ಯಕ್ರಮ ಜರಗುವುದು ದಿನಾಂಕ 4 ಕ್ಕೆ ವಾಜ ಬಯಾನ ಜರಗುವುದು ಚುನಾವಣಾ ನೀತಿ ಸಂಹಿತೆ ಜಾರಿ ಇರುವದರಿಂದ ಉರುಸಿನ ಎಲ್ಲಾ ಕಾರ್ಯಕ್ರಮಗಳು ರಾತ್ರಿ 10 ಘಂಟೆಗೆ ಮುಕ್ತಾಯವಾಗುತ್ತದೆ. ಖವ್ವಾಲಿ ಕಾರ್ಯಕ್ರಮ ದಿನಾಂಕ 19 ಕ್ಕೆ 9 ಘಂಟೆಗೆ ಜರಗುವುದು ದೆಹಲಿಯಿಂದ ನೌಶಾದ ಅಲಿಖಾನ ಹಾಗೂ ಅಸ್ಲಮ್ ಅಕ್ರಮ ಸಾಬ್ರಿ ಬರುವವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಾದಾಪೀರ ಮುಚ್ಚಾಲೆ, ಸುಲೇಮಾನ ಕಣಕೆ, ಸಾಹೇಬ್ ಜಾನ್ ಹವಾಲ್ದಾರ, ಗದಗ ಮುತ್ತಾರ್, ಕರೀಮಸಾಬ್ ಇರ್ಫಾನ್ ಮೀರ್ಜಾ ಅಕ್ಬರ ಸೂರಣಗಿ, ಜಮೀಲ್ ಸೂರಣಗಿ, ಖಾಜಾ ಜಮಖಂಡಿ, ಕರಿಮಸಾಬ್ ಸೂರಣಗಿ, ದಾದಾಪೀರ ಕಾರಡಗಿ, ಸಫೀಕ ಅಹಮ್ಮದ ಸಿದ್ದಕ್ಕಿ, ಫಿರದೋಷ ಆಡೂರ, ಕಲಂದರಸಾಬ್ ಮುಳಗುಂದ, ಜಾಕೀರಹುಸೇನ್ ಹವಾಲ್ದಾರ್, ಮುನಿರಾಹ್ಮದ ಸಿದ್ದಾಪೂರ, ಶಾದಿಕ ಸಮಲ್ಲೆವಾಲೇ, ಶಾದಿಕ ಸಿದ್ದಾಪೂರ, ಪೈಮ್ ಪಲ್ಲಿ, ಜಮೀಲ್ ಸೂರಣಗಿ ಸೇರಿದಂತೆ ಅನೇಕರು ಹಾಜರಿದ್ದರು.