ಉರುಸು ಕಾರ್ಯಕ್ರಮ

ನರೇಗಲ್ಲ,ಮೇ16: ಪಟ್ಟಣದ ಭಾವೈಕ್ಯತೆಗೆ ಹೆಸರಾದ ಹಜರತ್ ರೈಮಾನ್ ಶಾವಲಿ ಉರುಸಿನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಸೌಹಾರ್ದತೆಗೆ ಸಾಕ್ಷಿಯಾಗಿ ಗಮನ ಸೆಳೆದಿರುವ ಉರುಸು ಆಚರಣೆಗೆ ಜಾತಿ ಭೇದ ಬಾವವಿಲ್ಲದೇ ಎಲ್ಲರೂ ಒಂದಾಗಿ ಉರುಸಿನಲ್ಲಿ ಭಾಗವಹಿಸಿ ಭಾವೈಕತೆಗೆ ಸಾಕ್ಷಿಯಾದರು. ಉರುಸಿನ ಮೆರವಣಿಗೆಯು ಸಯ್ಯದ್ ಮಂಜುರ್ ಹುಸೇನ್ ಶ್ರೀಗಳ ನೇತೃತ್ವದಲ್ಲಿ ನಡೆಯಿತು.
ದರ್ಗಾದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉರುಸಿನ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕೋಲಾಟ, ಭಜನೆ, ಮರಗಾಲ ಕುಣಿತ ಉರುಸಿಗೆ ಮೆರಗು ತಂದವು. ಪಟ್ಟಣದ ಮಜರೆ ಗ್ರಾಮಗಳಾದ ಕೊಚಲಾಪುರ, ತೋಟಗಂಟೆ, ಮಲ್ಲಾಪುರ, ದ್ಯಾಂಪುರ, ಕೊಡಿಕೊಪ್ಪ, ಬೂದಿಹಾಳ, ಜಕ್ಕಲಿ, ಮಾರನಬಸರಿ, ಹಾಲಕೆರೆ, ನಿಡಗುಂದಿ, ಕೋಟುಮಚಗಿ, ಗ್ರಾಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.