ಉರಿಗೌಡ, ನಂಜೇಗೌಡ ಹೆಸರಲ್ಲಿ ಬಿಜೆಪಿ ರಾಜಕೀಯ::ಎಚ್ ಡಿಕೆ ವಾಗ್ದಾಳಿ‌

ಬೆಂಗಳೂರು,ಮಾ.18-;ಇತಿಹಾಸದಲ್ಲಿ ಇಲ್ಲದ ಉರಿಗೌಡ, ನಂಜೇಗೌಡ ಹೆಸರುಗಳನ್ನು ಎಳೆ ತಂದು ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ನೇರವಾಗ್ದಾಳಿ‌ ನಡೆಸಿದ್ದಾರೆ.

ಬಿಜೆಪಿ, ಜೀವಂತ ಇರುವ ಉರಿಗೌಡ, ನಂಜೇಗೌಡ ಅವರನ್ನು ಕೋಮು ದಳ್ಳುರಿಯಲ್ಲಿ ಬೆಯಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉರಿಗೌಡ, ನಂಜೇಗೌಡ ಇದ್ದರೋ ಇಲ್ಲವೋ ಗೊತ್ತಿಲ್ಲ. ಜೀವಂತ ಬದುಕಿರುವ ಉರಿಗೌಡ, ನಂಜೇಗೌಡರ ಬಗ್ಗೆ ಯೋಚಿಸಬೇಕು ಎಂದು ರೈತರ ಕುರಿತಾಗಿ ಅವರು ಹೇಳಿದರು.

ಈ ವಿಚಾರ ಈಗ ಅಪ್ರಸ್ತುತ. ಒಂದು ಸಮಾಜ, ಇನ್ನೊಂದು ಸಮಾಜ ಅನುಮಾನದಿಂದ ನೋಡುವಂತಾಗಿದೆ. ಬಿಜೆಪಿ ನೈತಿಕತೆ ಉಳಿಸಿಕೊಳ್ಳದೆ ಇದನ್ನು ಎತ್ತಿಕಟ್ಟುತ್ತಿದೆ. ಇವರಿಗೆ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಶ್ರೀ ಬಾಲಗಂಗಾಧರ ಸ್ವಾಮೀಜಿ ಹೆಸರಿದ್ದ ಜಾಗದಲ್ಲಿ ಉರಿಗೌಡ ,ನಂಜೇಗೌಡ ಹೆಸರನ್ನ ದ್ವಾರಕ್ಕೆ ಹಾಕಿದ್ದು ಅಕ್ಷಮ್ಯ ಅಪರಾಧ. ಯಾರೋ ಉಗಿದರು ಅಂತ ಬಳಿಕ ತೆಗೆದಿದ್ದಾರೆ. ಈ ಘಟನೆಯಿಂದ ಒಕ್ಕಲಿಗರ ಮತಗಳು ಬದಲಾಗಲ್ಲ. ಒಕ್ಕಲಿಗ ಮತ ಭದ್ರವಾಗಿದೆ ಎಂದರು

ಇವೆರೆಡೂ ಹೆಸರುಗಳು ಕಾಲ್ಪನಿಕ ಅಷ್ಟೇ. ಈ ಇಬ್ಬರ ಹೆಸರಲ್ಲಿ ಸಿನಿಮಾ ಮಾಡಬಹುದು, ಹಣ ಮಾಡಬಹುದು ಅಷ್ಟೇ. ಬೇರೆ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಅವರು ಕಿಡಿಕಾರಿದರು.