ಉಮೇಶ್ ಕಾಂಬ್ಳೆರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ರಾಯಚೂರು.ಏ.೨.ಲೋಕಾಯುಕ್ತ ಇಲಾಖೆಯಲ್ಲಿ ವಿಶೇಷ ಸೇವೆಯನ್ನು ಗುರುತಿಸಿ ಜಿಲ್ಲೆಯ ಲೋಕಾಯುಕ್ತ ಸಿಪಿಐ ಉಮೇಶ್ ಕಾಂಬ್ಳೆ ಅವರಿಗೆ ಮುಖ್ಯಮಂತ್ರಿರವರ ಚಿನ್ನದ ಪದಕವನ್ನು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೀಡಿ ಗೌರವಿಸಿದರು.
ಉಮೇಶ್ ಕಾಂಬ್ಳೆ ಅವರು ಮೂಲತಃ ವಿಜಯಪುರ ಜಿಲ್ಲೆಯವರಾಗಿದ್ದು ೨೦೦೭ ರಿಂದ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಇವರು ಪೊಲೀಸ್ ಇಲಾಖೆಯಲ್ಲಿ ಸೇರಿದ ನಂತರ ಅಪರಾಧ ಪ್ರಕರಣ ಪತ್ತೆ ಹಚ್ಚಿ ೬೩ ಲಕ್ಷದ ಚಿನ್ನಾಭರಣವನ್ನು ಕಳೆದುಕೊಂಡವರಿಗೆ ನೀಡಿದ್ದಾರೆ.
ನಗರದ ಐಡಿಎಸ್‌ಎಂ ಬಡಾವಣೆಯಲ್ಲಿ ಸಿಸಿ ಕ್ಯಾಮರಾ ಅಳವಡಿಕೆ,೧೭ ಎಲ್ ಪಿಎಸ್ ಪ್ರಕರಣಗಳ ಪತ್ತೆ ಅಚ್ಚಿದ್ದರು ಇವರು ಇವರು ಬಟ್ಕಳ, ಬಸವಕಲ್ಯಾಣ, ಮಾನ್ವಿ, ದೇವದುರ್ಗ,ರಾಯಚೂರು ಸೇರಿದಂತೆ ಇನ್ನಿತರ ನಗರದಲ್ಲಿ ಪಿಎಸ್‌ಐ ಆಗಿ ಸೇವೆಸಲ್ಲಿಸಿದ್ದು ಮಾ.೨೦೨೦ ರಂದು ಲೋಕಾಯುಕ್ತ ಇಲಾಖೆಯ ಸಿಪಿಐ ಆಗಿ ಭಡ್ತಿಹೊಂದಿದ್ದಾರೆ ಇವರ ಕಾರ್ಯವನ್ನು ಸರ್ಕಾರ ಗುರಿತಿಸಿ ೨೦೨೦ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಮಾಡಿದ್ದು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಚಿನ್ನದ ಪದಕ ನೀಡಿ ಗೌರವಿಸಿದರು.