ಉಮೇಶ್ ಕತ್ತಿ ರಾಜೀನಾಮೆಗೆ ಒತ್ತಾಯ

ದೇವದುರ್ಗ.ಮೇ.೩-ಬಡವರು ರೇಷನ್ ಕೇಳಿದರೆ ಸಾಯುವಂತೆ ಹೇಳುವ. ಆಹಾರ ಮತ್ತು ನಾಗರಿಕ ಸರಬರಾಜ ಸಚಿವ ಉಮೇಶ್ ಕತ್ತಿಯನ್ನು ಕೂಡಲಿ ಸಚಿವ ಸಂಪುಟದಿಂದ ಕೈಬಿಡಬೇಕೆಂದು. ಬಹುಜನ ಸಮಾಜವಾದಿ ಪಾರ್ಟಿ ತಾಲೂಕ ಅಧ್ಯಕ್ಷ ಪ್ರಭು ಕಾಕರಗಲ್ ಸೋಮವಾರ ಗ್ರೇಡ್ ೨ ತಹಸೀಲ್ದಾರ್ ಶ್ರೀನಿವಾಸ ಚಾಪಲ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ರಾಜ್ಯ ದೇಶದಲ್ಲಿ ಮಹಾಮಾರಿ ಕೊರೋನಾ ಎರಡನೇ ಅಲೆ ಅಪ್ಪಳಿಸುತ್ತಿದ್ದು ಹಿನ್ನೆಲೆಯಲ್ಲಿ.
ಸರ್ಕಾರ ೧೫ದಿನಗಳ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಿ. ಆದೇಶ ಮಾಡಿದ ಹಿನ್ನೆಲೆಯಲ್ಲಿ ರೈತ ಕೂಲಿಕಾರ್ಮಿಕ, ಬೀದಿಬದಿ ಸಣ್ಣ-ಪುಟ್ಟ ವ್ಯಾಪಾರಸ್ಥರು, ಸೇರಿ ವಿವಿಧ ಅಂಗಡಿ-ಮುಂಗಟ್ಟುಗಳು, ಜೀವನ ನಡೆಸಲು ತೀವ್ರ ತೊಂದರೆ ಅನುಭವಿಸಿದ್ದು. ಹೀಗಾಗಿ ಸರ್ಕಾರದಿಂದ ೨೫ ಸಾವಿರ ಅವರ ಖಾತೆಗೆ ಜಮಾ ಮಾಡಬೇಕು ಹಾಗೂ ಹದಿನೈದು ದಿನಗಳ ಕಾಲ ಉಚಿತ ರೇಷನ್ ನೀಡಬೇಕು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಂಚರಾಜ್ಯ ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಟೊಂಕ ಕಟ್ಟಿ ನಿಂತಿರುವ ಬಿಜೆಪಿ ಸರ್ಕಾರ ಬಡ ಮತ್ತು ಕೂಲಿ ಕಾರ್ಮಿಕರ ಹಿತವನ್ನು ಮರೆತಿದೆ ಕೊರೋನಾ ದಿಂದ ರಾಜ್ಯದಲ್ಲಿ ಪ್ರತಿದಿನ ಸಾವು-ನೋವುಗಳು ಸಂಭವಿಸುತ್ತಿದ್ದು. ಅಂತ ಕುಟುಂಬಗಳಿಗೆ ಸೂಕ್ತವಾದ ಪರಿಹಾರ ನೀಡಿ. ರಾಜ್ಯದಲ್ಲಿ ತಡೆಯುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಶಿವಪ್ಪ ಬಲ್ಲಿದ, ನರಸಪ್ಪ ವಕೀಲರು, ಯೇಸು ಕಮಲದಿನ್ನಿ, ಬಸವರಾಜ ರಾಮದುರ್ಗ, ಮಲ್ಲಿಕಾರ್ಜುನ, ಹನುಮೇಶ್ ಕಾಕರಗಲ್, ರಾಚಪ ರಾಮದುರ್ಗ, ಸೇರಿದಂತೆ ಇತರರಿದ್ದರು.