ಉಮೇಶ್ ಕತ್ತಿ ಮಾಡಿರುವ ಅಪಮಾನ ಸಹಿಸಲು ಸಾಧ್ಯವಿಲ್ಲ

ದಾವಣಗೆರೆ.ಏ.೩೦; ರೈತ ಈ ದೇಶದ ಬೆನ್ನೆಲುಬು ಆದರೆ ಅಂಥ ಬೆನ್ನಲುಬಾದ ರೈತರಿಗೆ ಆಹಾರ ಸಚಿವರಾದ ಉಮೇಶ್ ಕತ್ತಿಯವರು ಮಾಡಿರುವ ಅವಮಾನ ಸಹಿಸಲು ಸಾಧ್ಯವಿಲ್ಲ ಎಂದು ಕಿಸಾನ್ ಕಾಂಗ್ರೆಸ್ ನ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಜಿಕ್ರಿಯಾ ಹೇಳಿದ್ದಾರೆ.ಈಗಾಗಲೇ ಕರ್ನಾಟಕ ಹಾಗೂ ದೇಶಾದ್ಯಂತ ಕೊರೊನ ಹೆಮ್ಮಾರಿ ಹಬ್ಬಿ ಜನ ರೋಸಿ ಹೋಗಿದ್ದಾರೆ. ರೋಗಿಗಳಿಗೆ ಆಕ್ಸಿಜನ್, ವ್ಯಾಕ್ಸಿನ್, ಆಸ್ಪತ್ರೆಲಿ ಬೆಡ್ ಸಿಗ್ತಿಲ್ಲ ಈ ವೇಳೆ   ಬಿಪಿಎಲ್ ಕಾರ್ಡಿಗೆ ನೀಡುವ ಸೌಲಭ್ಯಗಳ ಕುರಿತು ಅಸಂಭದ್ದ ಹೇಳಿಕೆ ನೀಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.  ಆದ್ದರಿಂದಇಡೀ ರಾಜ್ಯದ ಜನತೆಯ ಹಾಗೂ ರೈತರ ಬಹಿರಂಗ ಕ್ಷಮೆ ಯಾಚನೆ ಮಾಡಬೇಕು ಹಾಗೂ ನಿಮ್ಮ ಸಚಿವ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.