ಉಮೇದುವಾರಿಕೆಗೆ ಏ.೨೦ ಕೊನೆಯ ದಿನ- ಪ್ರಕಾಶ

ಮಾನ್ವಿ,ಏ.೧೩- ವಿಧಾನಸಭಾ ಕ್ಷೇತ್ರ ೫೫ – ಪರಿಶಿಷ್ಟ ಪಂಗಡ ಮೀಸಲಾತಿ ಕ್ಷೇತ್ರದಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಕ್ರಿಯೆ ಆರಂಭವಾಗಿದ್ದು, ಇಂದಿನಿಂದ ಏಪ್ರಿಲ್ ೨೦ ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಅಭ್ಯರ್ಥಿಗಳು ಸೂಕ್ತ ದಾಖಲಾತಿಯೊಂದಿಗೆ ತಾಲೂಕ ದಂಡಧಿಕಾರಿ ಚಂದ್ರಕಾಂತ ಎಲ್.ಡಿ ಇವರಿಗೆ ಉಮೇದುವಾರಿಕೆ ಸಲ್ಲಿಸಬಹುದಾಗಿದೆ ಎಂದು ತಾಲೂಕ ಚುನಾವಣೆ ಅಧಿಕಾರಿ ಪ್ರಕಾಶ ಹೇಳಿದರು.
ಪಟ್ಟಣದ ತಾಲೂಕ ದಂಡಧಿಕಾರಿ ಕಛೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತಾನಾಡಿದ ಇವರು ಚುನಾವಣೆ ಆಯೋಗದ ನಿರ್ದೇಶನದಂತೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್ ೧೩ ರಿಂದ ಎಪ್ರಿಲ್ ೨೦ ರವರೆಗೆ ನಾಮ ಪತ್ರ ಸಲ್ಲಿಸಬಹುದು, ಏಪ್ರಿಲ್ ೨೧ ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯುವುದು ಎಪ್ರಿಲ್ ೨೪, ಚುನಾವಣೆ ಮೇ ೧೦, ಫಲಿತಾಂಶ ಮೇ ೧೩ ರಂದು ನಡೆಯಲಿದ್ದು ಇದಕ್ಕೆ ಬೇಕಾಗಿರುವ ಎಲ್ಲ ರೀತಿಯ ಸಿದ್ಧತೆಯನ್ನು ತಾಲೂಕ ಆಡಳಿತ ಮಾಡಿಕೊಂಡಿದೆ ಎಂದು ಹೇಳಿದರು.
ನಂತರ ದಂಡಧಿಕಾರಿ ಕಛೇರಿಯ ಮುಂಭಾಗದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತರು ವಿಧಾನಸಭಾ ಚುನಾವಣಾ ಪ್ರತಿಜ್ಞಾ ವಿಧಿಯನ್ನು ಬೋಧಸಲಾಯಿತು ನಂತರ ತಾಲೂಕ ದಂಡಧಿಕಾರಿ ಕಛೇರಿಯಿಂದ ಬಸವ ವೃತ್ತದ ವೃತ್ತದವರೆಗೆ ಚುನಾವಣೆ ಕುರಿತು ಜನಜಾಗೃತಿ ಮೂಡಿಸುವ ಘೋಷಣೆಯನ್ನು ಕೂಗುತ್ತಾ ಸಾಗಿ ಜನರಿಗೆ ಭ್ರಷ್ಟಾಚಾರ ರಹಿತ ಚುನಾವಣೆಯಲ್ಲಿ ಮತ ನೀಡುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾನ್ವಿ ತಾಲೂಕ ದಂಡಧಿಕಾರಿ ಚಂದ್ರಕಾಂತ ಎಲ್ ಡಿ, ಸಿರವಾರ ದಂಡಧಿಕಾರಿ ರವಿಶರ್ಮ ಸಿರವಾರ, ಪುರಸಭೆ ಮುಖ್ಯಧಿಕಾರಿ ವೆಂಕಟಸ್ವಾಮಿ, ಪಿ.ಐ ಹಿರೇಮಠ, ಸೇರಿದಂತೆ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತರು ಇದ್ದರು.