ಉಮಾದೇವಿಗೆ ಪಿಹೆಚ್.ಡಿ ಪದವಿ

ಕಲಬುರಗಿ,ಸೆ.26-ಉಮಾದೇವಿ ಪ್ರಭುಗೌಡ ಪಾಟೀಲರಿಗೆ ಗುಲಬರ್ಗಾ ವಿಶ್ವ ವಿದ್ಯಾಲಯವು ಪಿಹೆಚ್.ಡಿ ಪದವಿ ನೀಡಿದೆ.
ಉಮಾದೇವಿ ಪಾಟೀಲ ಅವರು ಸಸ್ಯಶಾಸ್ತ್ರ ವಿಭಾಗದಲ್ಲಿ ಪ್ರೊ.ಶ್ರೀನಾಥರಾವ ಅವರ ಮಾರ್ಗದರ್ಶನದಲ್ಲಿ “ಅಂಗಾಂಶ ಕೃಷಿ’ ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯವು ಪಿಹೆಚ್.ಡಿ ಪದವಿ ನೀಡಿದ್ದು, ಅವರಿಗೆ ಪಿಹೆಚ್.ಡಿ ಪದವಿ ಲಭಿಸಿದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.