ಉಮಾಕಾಂತ ನಾಗಮಾರಪಳ್ಳಿಗೆ ಸನ್ಮಾನ

ಬೀದರ್: ಸೆ.16:ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕರಾಗಿ ಚುನಾಯಿತರಾದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರನ್ನು ಇಲ್ಲಿಯ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಸನ್ಮಾನಿಸಲಾಯಿತು.

ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಬ್ಯಾಂಕ್, ಎನ್‍ಎಸ್‍ಎಸ್‍ಕೆ ನಿರ್ದೇಶಕರು, ಪಿಕೆಪಿಎಸ್ ಅಧ್ಯಕ್ಷರು, ನಿರ್ದೇಶಕರು, ಬ್ಯಾಂಕ್, ಪಿಕೆಪಿಎಸ್ ಸಿಬ್ಬಂದಿ, ಸಹಕಾರಿಗಳು ಹಾಗೂ ಗಣ್ಯರು ಪುಷ್ಪ ಗುಚ್ಛ ನೀಡಿ, ಶಾಲು ಹೊದಿಸಿ ಸನ್ಮಾನಿಸಿದರು.

ಬಸವೇಶ್ವರ ವೃತದಿಂದ ಡಿ.ಸಿ.ಸಿ.ಬ್ಯಾಂಕಿನ ವರೆಗೆ ಕಾರಿನಲ್ಲಿ ಭವ್ಯಮೆರವಣಿಗೆ ಮಾಡಲಾಯಿತು ಬಸವೇಶ್ವರ ವೃತದಲ್ಲಿ ಪ್ರವೀಣ ದೊಡ್ಡಿ, ಅರುಣಕುಮಾರ ಹೋತಪೇಟ್, ಅಮೀತ ಕೋಟೆ ಇವರ ಗೆಳೆಯರು ಸೇರಿ ಕಿರನನಿಂದ ಮಾಲಾರ್ಪಣೆ ಮಾಡಿದರು.

ಬೀದರ್ ಜಿಲ್ಲೆಯ ಇಂಜಿನಿಯರ್ಸ್ ಅಸೋಶಿಏಶನ್ ವತಿಯಿಂದ ಹಾವಶೆಟ್ಟಿ ಪಾಟೀಲ್, ಮಹಾದೇವ್ ಜೋಶಿ, ಪ್ರಕಾಶ ಟೋಣ್ಣೆ, ಅನೀಲ್ ಖೇಣಿ, ಅನೀಲ್ ಔರಾದೆ, ಶ್ರೀನಿವಾಸ ಸಾಳೆ, ರಂಜಿತ ಪಾಟೀಲ್, ಡಾ: ವಸಂತ ಪಾಟೀಲ್, ಲಾಲಜಿ ಪಾಟೀಲ್, ಗೋಪಾಲ್ ಲೋಯಾ, ಶಿವಕುಮಾರ ರೆಡ್ಡಿ, ರವಿ ಮೂಲಗೆ, ಶಿವಶಕ್ತಿ ಟ್ರೇಡರ್ಸ್ ಮಾಲಿಕರಾದ ವಸಂತ ಪಟೇಲ್, ಪ್ರಾಣೇಶ್ ನಂದಿಕೊರ್, ಶಾಲು ಹೊದಿಸಿ ಪುಷ್ಪಾ ಗುಚ್ಚ್ ನೀಡಿ ಸನ್ಮಾನಿಸಿದರು.

ಮಹಾ ಮಂಡಳ ಚುನಾವಣೆಯಲ್ಲಿ ತಮ್ಮನ್ನು ಅತಿಹೆಚ್ಚು ಮತಗಳಿಂದ ಆಯ್ಕೆಗೊಳಿಸಿರುವುದು ಸಂತಸ ಉಂಟು ಮಾಡಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ ಎಂದು ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

ಮಹಾ ಮಂಡಳದ ಎಲ್ಲ ಸೌಲಭ್ಯಗಳನ್ನು ಬೀದರ್ ಜಿಲ್ಲೆಯ ರೈತರಿಗೆ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ರಾಜ್ಯ ಮಹಿಳಾ ಸಹಕಾರ ಮಹಾ ಮಂಡಳ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಎನ್‍ಎಸ್‍ಎಸ್‍ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ, ಉಪಾಧ್ಯಕ್ಷÀ ಬಾಲಾಜಿ ಚೌವ್ಹಾಣ, ಹಾಗು ಕಾರಖಾನೆಯ ಎಲ್ಲಾ ನಿರ್ದೇಶಕರು ಮತ್ತು ಸಬ್ಬಂದಿ ವರ್ಗದವರು ಸನ್ಮಾನಿಸಿದರು, ತಾಳÀಮಪಲ್ಲಿ ಗ್ರೂಪನ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ ತಾಳಮಪಳ್ಳಿಯವರು ಶಾಲು ಹೂ ಗುಚ್ ನೀಡಿ ಸನ್ಮಾನಿಸಿದರು, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವಿಜಯಕುಮಾರ ಎಸ್. ಪಾಟೀಲ ಗಾದಗಿ, ಪರಮೇಶ್ವರ ಮುಗಟೆ, ಬಸವರಾಜ ಹೆಬ್ಬಾಳೆ, ಸಂಗಮೇಶ ಪಾಟೀಲ, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಅಶೋಕ ಮೂಳೆ ದಾಬಕಾ, ಗುಂಡಯ್ಯಾ ಸ್ವಾಮಿ ಮತ್ತು ತೆಲಂಗಾಣ ರಾಜ್ಯ ರಾಷ್ಟ್ರೀಯ ಬಸವ ದಳದ ಪ್ರಧಾನ ಕಾರ್ಯದರ್ಶಿ ಸುರೇಶ ಕೋರೆ ಯನಗುಂದಾ, ಅಮೃತಪ್ಪ ಪಾರಾ, ಪ್ರಭುರಾವ ಕಸ್ತುರೆ, ರಘುನಾಥರಾವ್ ಕುಲಕರ್ಣಿ, ಹಾಗೂ ಸಹಕಾರ ಸಂಘಗಳ ಉಪ ನಿಬಂಧಕ ಮಂಜುಳಾ, ಸಹಾಯಕ ಉಪ ನಿಬಂಧಕ ಆರ್. ಪವನಕುಮಾರ, ಮುಖಂಡರಾದ ಕಲ್ಲಪ್ಪ ದಾನಾ, ಸಂಜು ಸಿದ್ದಾಪುರ, ವೀರಶೆಟ್ಟಿ ಪಟ್ನೆ ಇದ್ದರು.