ಉಮಲೂಟಿ ನರ್ಸ್ ಪ್ರಮೀಳಾ ಲಂಚ: ರೋಗಿಗಳ ಅಳಲು

ಸಿಂಧನೂರು.ಏ.೩- ಆಸ್ಪತ್ರೆಗೆ ಬರುವ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡದೆ ಲಂಚ ತೆಗೆದುಕೊಂಡು ಚಿಕಿತ್ಸೆ ನೀಡಿ ಮಾತ್ರೆಗಳನ್ನು ಕೊಡುತ್ತಿದ್ದು, ಹಣ ಕೊಡದೆ ಇದ್ರೆ ಇಲ್ಲ ಇದರಿಂದ ಬಡ ರೋಗಗಳಿಗೆ ತುಂಬಾ ತೊಂದರೆಯಾಗಿದ್ದು, ಬಡ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡುವ ಉಮಲೂಟಿ ಗ್ರಾಮದ ನರ್ಸ್ ಮೇಲೆ ಕ್ರಮ ಕೈಗೊಂಡು ಅವರನ್ನು ಅಮಾನತ್ತು ಮಾಡುವಂತೆ ರೋಗಿಗಳು ಹಾಗೂ ಸಾರ್ವಜನಿಕರು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ಒತ್ತಾಯ ಮಾಡಿದ್ದಾರೆ.
ತಾಲ್ಲೂಕಿನ ಉಮಲೂಟಿ ಗ್ರಾಮದಲ್ಲಿರುವ ಉಪ ಆರೋಗ್ಯ ಕೇಂದ್ರ ನರ್ಸ್ ಪ್ರಮೀಳಾದೇವಿ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಕರ್ತವ್ಯ ಲೋಪ ಎಸಗುತ್ತಿದ್ಲು ಕಂಡುಬಂದಿದೆ ಸರ್ಕಾರದಿಂದ ರೋಗಗಳಿಗೆ ಬಂದ ಸೌಲಭ್ಯಗಳನ್ನು ನೀಡಲು ಈಕೆಗೆ ಹಣ ಕೊಡಲೆಬೇಕು. ಹಣ ಕೊಡದಿದ್ದರೆ ಯಾವುದೇ ಕೆಲಸ ಮಾಡುವುದಿಲ್ಲ.
ಸರ್ಕಾರದ ಸಂಬಳ ತಿಂದು ಬಡ ರೋಗಿಗಳಿಂದ ಹಣ ತೆಗೆದುಕೊಳ್ಳುವುದು ತಪ್ಪಲ್ಲವೆ ಎಂದು ಯಾರಾದರೂ ಈಕೆಯನ್ನು ಕೇಳಿದರೆ ನನ್ನ ಮೇಲಾಧಿಕಾರಿಗಳು ವೀಕ್ಷಣೆಗೆ ಬಂದಾಗ ಅವರ ಕರ್ಚು ವೆಚ್ಚವನ್ನು ನಾನು ನನ್ನ ಸಂಬಳದಲ್ಲಿ ಮಾಡಬೇಕಾ ನೀವು ಕೊಟ್ಟ ಲಂಚದ ಹಣದಲ್ಲಿ ಅವರಿಗೆ ಸಮಾಧಾನ ಮಾಡಿ ಕಳಿಸಬೇಕಾಗುತ್ತೇದೆ ಎಂದು ದಿಮಾಕಿನ ಮಾತು ಬೇರೆ ಆಡುತ್ತಾಳೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಗರ್ಭಿಣಿ ಬಾಣಾಂತಿಯರ ಕಷ್ಟ ಹೇಳತೀರದು ತಾಯಿ ಕಾರ್ಡ್ ಕೊಡಲು ಈಕೆಗೆ ೧೦೦ ರೂ ಕೊಡಲೇಬೇಕು ಹಣ ಕೊಡದಿದ್ದರೆ, ಕಾರ್ಡ್ ಕೊಡುವುದಿಲ್ಲ ದುಡಿಯಲು ಬೆಂಗಳೂರಿಗೆ ಹೋದ ಕೃಷಿ ಕೂಲಿ ಕಾರ್ಮಿಕರು ತಡವಾಗಿ ಗ್ರಾಮಕ್ಕೆ ಬಂದು ನಮ್ಮ ತಾಯಿ ಕಾರ್ಡ್ ಕೊಡಿ ಎಂದು ನರ್ಸ್ ಪ್ರಮೀಳಾದೇವಿಯನ್ನು ಕೇಳಿದರೆ ಇಷ್ಟು ದಿನ ಏನು ಮಾಡಿದ್ದೀರಿ ನಿಮ್ಮ ಕಾರ್ಡ್ ವಾಪಸ್ಸು ಹೋಗಿದೆ ತುರ್ವಿಹಾಳ ಆಸ್ಪತ್ರೆಗೆ ಹೋಗಿ ಡಾಕ್ಟರನ್ನು ಕೇಳಿ ಕೊಡುತ್ತಾರೆ ಎನ್ನುತ್ತಾಳೆ. ನಮಗೆ ಗೊತ್ತಾಗುತ್ತಿಲ್ಲ ನೀವೆ ಕೊಡಿ ಎಂದು ವಿನಂತಿ ಮಾಡಿಕೊಂಡಾಗ ಯಾರಿಗೆ ಹೇಳಬೇಡಿ ೪೦೦ ಅಥವಾ ೫೦೦ ರೂಪಾಯಿ ಕೊಟ್ಟರೆ ಕೊಡುತ್ತೇನೆ ಎಂದು ೪೦೦ ರಿಂದ ೫೦೦ ರೂ ಲಂಚ ತೆಗೆದುಕೊಂಡು ತಾಯಿ ಕಾರ್ಡ್ ಕೊಡುತ್ತಾಳೆ. ಈ ಲಂಚ ಬಾಕ್ ನರ್ಸ್.
ಉಮಲೂಟಿ ಉಪ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಹಳ್ಳಗಳಿಗೆ ಈಕೆ ಹೋಗುವುದೆ ಅಪರೂಪ ಹಳ್ಳಿಗಳಿಗೆ ಹೋಗಿ ಜನರ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡುವ ಮೂಲಕ ಅವರ ಆರೋಗ್ಯ ಕಾಪಾಡುವದು ಈಕೆಯ ಜವಾಬ್ದಾರಿಯಾಗಿದೆ. ಆದರೆ ಯಾರೆ ಏನೇ ಹೇಳಲಿ ಕಿವಿಯಲ್ಲಿ ಹಾಕಿಕೊಳ್ಳದೆ ಉಮಲೂಟಿ ತಮ್ಮ ಮನೆಯಲ್ಲಿ ಇರುತ್ತಾರೆ. ನಮಗೆ ಆರೋಗ್ಯ ಸರಿ ಇಲ್ಲ ನಮ್ಮ ಹಳ್ಳಿಗೆ ಬನ್ನಿ ಮೇಡಂ ಅಂದರೆ ನನಗೆ ಬರಲು ಆಗುವುದಿಲ್ಲ. ನೀವು ಬೇಕಿದ್ದರೆ ನನ್ನ ಮನೆಗೆ ಬಂದರೆ ಚಿಕಿತ್ಸೆ ನೀಡುತ್ತೇನೆ ಎಂದಾಗ ಬೈಕ್ ಇದ್ದವರು ಬಂದು ಚಿಕಿತ್ಸೆಯನ್ನು ಪಡೆದುಕೊಂಡು ಹೋಗುತ್ತಾರೆ ಬೈಕ್ ಇಲ್ಲದ ಬಡ ರೋಗಿಗಳು ಈಕೆಗೆ ಇಡೀ ಶಿಪ್ ಪ್ರತಿದಿನ ಹಾಕುತ್ತಿದ್ದಾರೆ ಎನ್ನಲಾಗಿದೆ.
ನೀವು ಯಾವ ಹಳ್ಳಿಗಳಿಗೆ ಹೋಗದೆ ಮನೆಯಲ್ಲಿ ಇದ್ದರೆ ನಿಮ್ಮ ಮೇಲಾದಿಕಾರಿಗಳ ಭಯ ಇಲ್ಲವೆ ನಿಮಗೆ ಅವರು ಏನು ಅನ್ನುವದಿಲ್ಲವೆ ಎಂದು ಸಾರ್ವಜನಿಕರು ಕಿರಿಯ ಮಹಿಳಾ ಸಹಾಯಕಿ ಪ್ರಮೀಳಾ ದೇವಿ ಮೇಡಂರನ್ನು ಕೇಳಿದರೆ ನನ್ನ ಮೇಲೆ ಇರುವ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಜಯಲಕ್ಷ್ಮಿ ಮಗಳ ಹುಟ್ಟಿದ ಹಬ್ಬಕ್ಕೆ ಡ್ರೆಸ್ ಕೊಡಿಸುತ್ತೇನೆ. ಅಲ್ಲದೆ ಜಯಲಕ್ಷ್ಮಿಗೆ ಅವರು ಕೇಳಿದಾಗ ಸೀರೆ ತಂದು ಕೊಡುತ್ತೇನೆ, ಅಲ್ಲದೆ ತುರ್ವಿಹಾಳ ಡಾ.ರಮೇಶವರಿಗೆ ತಿಂಗಳ ಮಾಮೂಲು ಕೊಡುವುದರಿಂದ ನಾನು ಕೆಲಸ ಮಾಡದಿದ್ದರು ಹಾಗೂ ನನ್ನ ವಿರುದ್ಧ ಜನ ದೂರು ನೀಡಿದರು, ಅವರು ನನಗೇನು ಮಾಡುವುದಿಲ್ಲ ಎಂದು ಭಂಡತನದದಿಂದ ಪ್ರಮೀಳಾದೇವಿ ಹೇಳುತ್ತಾರೆ.
ಎಂದರೆ ಈಕೆಯ ಧೈರ್ಯ ಮೆಚ್ಚುವಂತಹದು ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಜಯಲಕ್ಷ್ಮೀ ಹಾಗೂ ತುರ್ವಿಹಾಳ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಮೇಶ ಈಕೆಯ ಮೇಲೆ ಕ್ರಮ ಕೈಗೊಳ್ಳದೆ ಇದ್ದರೆ ಈಕೆ ಮಾಡಿರುವ ಆರೋಪ ಸತ್ಯ ಎಂದು ಜನ ನಂಬೇಕಾಗುತ್ತೇದೆ.
ಉಮಲೂಟಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಪ್ರಮೀಳಾ ದೇವಿಯವರ ಇನ್ನುಳಿದ ವರದಿ ಮುಂದೆ ಇದೆ.