ಉಮಲೂಟಿ : ಅರ್ಥಪೂರ್ಣವಾಗಿಸಿದ ಸಿದ್ದರಾಮೇಶ್ವರ ಜಯಂತಿ

(ಸಂಜೆವಾಣಿ ವಾರ್ತೆ)
ಸಿಂಧನೂರು.ಜ.೩೧- ತಾಲೂಕಿನ ಉಮಲೂಟಿ ಗ್ರಾಮದಲ್ಲಿ ಭೋವಿ ಸಮಾಜದ ಆರಾಧ್ಯ ದೈವವಾದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಿದರು.
ಶಿವಯೋಗಿ ಸಿದ್ದರಾಮೇಶ್ವರ ನಾಮಫಲಕ ಕ್ಕೆ ಹೂವಿನ ಹಾರ ಹಾಕಿ, ಪೂಜೆ ಸಲ್ಲಿಸಿ ಜಯಂತಿಯನ್ನು ಶಾಸಕ ಬಸನಗೌಡ ತುರವಿಹಾಳ, ಬಿಜೆಪಿಯ ಮುಖಂಡರಾದ ಪ್ರಸನ್ನ ಪಾಟೀಲ್, ಶಂಕ್ರಗೌಡ, ವೀರಭದ್ರ ಗೌಡ, ವಿರುಪನಗೌಡ ಜಾಹಗೀರದಾರ, ಪಂಪನಗೌಡ, ಮೌಲಸಾಬ, ಬಾಬುಸಾಬ, ಅಮರೇಗೌಡ, ಬಿಜೆಪಿ ಎಸ್.ಸಿ ಮೊರ್ಚಾ ಜಿಲ್ಲಾಧ್ಯಕ್ಷ ಹಾಗೂ ತಾಲೂಕ ವಕೀಲರ ಸಂಘದ ಖಜಾಂಚಿ ಶರಣಬಸವ ಉಮಲೂಟಿ, ಲಕ್ಷ್ಮಣ ಗುರಿಕಾರ, ಶಾಮಿದಸಾಬ್ ಹವಾಲ್ದಾರ್, ಪ್ರಮೋದ, ಮುದಿಯಪ್ಪ ವೈ.ಗುತ್ತೆದಾರ, ರಾಮಣ್ಣ ಜಿ, ರಾಮಣ್ಣ ತಲೆಖಾನ್, ರಾಮಣ್ಣ ಟೇಲರ್, ಹನುಮಂತಪ್ಪ ಕೊಳಬಾಳ, ಗುಡದಪ್ಪ, ಪರಶುರಾಮ, ಬಸವರಾಜ ವಾಯ್, ಮುತ್ತಣ್ಣ ಕೊಳಬಾಳ, ಶರಣಪ್ಪ .ಕೆ ಅನೇಕರು ಭಾಗವಹಿಸಿದ್ದರು.