ಉಭಯ ಭಾಷಿಕ‌ ಲೇಖಕ ಗುತ್ತಿ ಚಂದ್ರಶೇಖರರೆಡ್ಡಿ ನಿಧನ

ಬಳ್ಳಾರಿ ಜ 02 : ತಾಲೂಕಿನ ಜೋಳದರಾಶಿ ಗ್ರಾಮದ ಕನ್ನಡ ಮತ್ತು ತೆಲುಗು ಭಾಷೆಯ ಲೇಖಕ ಗುತ್ತಿ ಚಂದ್ರಶೇಖರ ರೆಡ್ಡಿ (76) ನಿನ್ನೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೂವರು ಪುತ್ರರನ್ನು ಅಗಲಿದರು.
ಹೈದ್ರಾಬಾದ್‌ನಲ್ಲಿ ಮಗನೊಂದಿಗೆ ನೆಲೆಸಿದ್ದ ಅವರು ಕಳೆದ 20 ದಿನಗಳಿಂದ ಜೋಳದರಾಶಿಯಲ್ಲಿದ್ದರು. ಜಿಲ್ಲೆಯ ವಿಭಜನೆ ವಿರೋಧಿಸಿ ಈಚೆಗೆ ಗ್ರಾಮದ ಬಳಿ ನಡೆದಿದ್ದ ಹೆದ್ದಾರಿ ಬಂದ್ ಪ್ರತಿಭಟನೆಯಲ್ಲೂ ಅವರೂ ಪಾಲ್ಗೊಂಡಿದ್ದರು.
ಜೋಳದರಾಶಿ ದೊಡ್ಡನಗೌಡರಿಂದ ಪ್ರಭಾವಿತರಾಗಿದ್ದ ಅವರು ಬಸವಣ್ಣ ಸರ್ವಜ್ಞ ಸೇರಿದಂತೆ ಹಲವು ಶರಣರವ ವಚನಗಳನ್ನು ತೆಲುಗಿಗೆ ಅನುವಾದಿಸಿದ್ದರು.
ತೆಲುಗಿನ ಆದಿಕವಿ ವೇಮನ ಸೇರಿದಂತೆ ತೆಲುಗು ಲೇಖಕರ ಕೃತಿಗಳನ್ನು ಕನ್ನಡಕ್ಕೆ ತಂದಿದ್ದರು. ಇಂದು ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು.
ಇವರ ನಿಧನಕ್ಕೆ ರಾಘವ ಮೆಮೋರಿಯಲ್ ಅಸೋಶಿಯೇಶನ್ ಗೌರವಾಧ್ಯಕ್ಷರು,ಅಧ್ಯಕ್ಷರು, ಗೌರವ ಕಾರ್ಯದರ್ಶಿ, ಉಪಾಧ್ಯಕ್ಷರು, ಖಜಾಂಚಿ, ಜಂಟಿ ಕಾರ್ಯದರ್ಶಿ, ಕಾರ್ಯಕಾರಿ ಸಮಿತಿ ಸದಸ್ಯರು,ವೀಶೇಷ ಆಹ್ವಾನಿತರು,ಅಜೀವ ಸದಸ್ಯರು,
ಅಲಾಪ್ ಸಂಗೀತ ಕಲಾ ಟ್ರಸ್ಟ್, ರಮೇಶ್ ಗೌಡ ಪಾಟೀಲ್ ಕಲಾ ಟ್ರಸ್ಟ್, ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ಅವರ ಅಗಲಿಕೆಯ ದುಃಖವನ್ನು ಬರಿಸುವ ಶಕ್ತಿ ದೇವರು ಕರುಣಿಸಲೆಂದು ಕೋರಿದ್ದಾರೆ